ಹುಬ್ಬಳ್ಳಿ: ಫಾಸ್ಟ್‌ಟ್ರ್ಯಾಕ್ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆಗೆ ನೇಹಾ ತಂದೆ ಕಾರ್ಪೊರೇಟ್ ನಿರಂಜನ ಹಿರೇಮಠ ಪ್ರತಿಕ್ರಿಯೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಚಿವರ ಹಾಗೂ ಸರ್ಕಾರದ ನಿರ್ಧಾರವನ್ನು ಪಾಲಿಕೆಯ ಕಾಂಗ್ರೆಸ್ ಸದಸ್ಯ ಹಾಗೂ ನೇಹಾಳ ತಂದೆ ನಿರಂಜನ ಹಿರೇಮಠ ವಿರೋಧಿಸಿದ್ದು, ಈ ತಮ್ಮದೇ ಸರ್ಕಾರದಿಂದ ನಮ್ಮ ಮಗಳ ಸಾವಿಗೆ ನ್ಯಾಯ ಸಿಗುವುದಿಲ್ಲ.

ಏಪ್ರಿಲ್ 17ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜ್ ನಲ್ಲಿ ನಡೆದಿದ್ದ ಕೈ ಕಾರ್ಪೊರೇಟ್‌ರ ಮಗಳ ಹತ್ಯೆ ಪ್ರಕರಣಕ್ಕೆ ದೇಶವ್ಯಾಪಿ ಖಂಡನೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ನೇಹಾ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.

ಸಿಎಂ ಸಿದ್ದರಾಮಯ್ಯ ಕೂಡ ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದರು. ಶೀಘ್ರ ನ್ಯಾಯಕ್ಕಾಗಿ ಫಾಸ್ಟ್‌ಟ್ರ್ಯಾಕ್ ಕೋರ್ಟ್ ಮಾಡುವುದಾಗಿ ಸಿಎಂ ಮಾತು ಕೊಟ್ಟಿದ್ದರು. ಆದರೆ ಈಗ ಏಕಾಏಕಿ ಮಾತು ತಪ್ಪಿದ್ದಾರೆ ಎಂದರು.