ಕುಂದಗೋಳ : ಯರಗುಪ್ಪಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಐತಿಹಾಸಿಕ ಮೊಹರಂ ಹಬ್ಬದ ನಿಮಿತ್ತ ಜುಲೈ 18ರಂದು ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹೆಜ್ಜೆ ಮೇಳ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ಮೇಳದಲ್ಲಿ ಭಾಗವಹಿಸುವ ತಂಡಗಳ ಹೆಸರನ್ನು ಯರಗುಪ್ಪಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜುಲೈ18ರಂದು ಮಧ್ಯಾಹ್ನ 12 ಗಂಟೆ ಒಳಗಾಗಿ ನೋಂದಾಯಿಸಬೇಕು ಎಂದು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ತಿಳಿಸಿದೆ.

ಗೆದ್ದ ತಂಡಗಳಿಗೆ ಪ್ರಥಮ 10 ಗ್ರಾಂ ಬಂಗಾರ ಹಾಗೂ ಶೀಲ್ಡ್‌ ದ್ವಿತೀಯ ಬಹುಮಾನ 5 ಗ್ರಾಂ ಬಂಗಾರ ಹಾಗೂ ಶೀಲ್ಡ್‌ ತೃತೀಯ ಬಹುಮಾನ 2.5 ಬಂಗಾರ ಹಾಗೂ ಶೀಲ್ಡ್ ವಿಶೇಷ ಬಹುಮಾನ 2.5 ಬಂಗಾರ ಹಾಗೂ ಶೀಲ್ಡ್ ವಿತರಿಸಲಾಗುವುದು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಳ್ಳೋಳ್ಳಿಯ ಚನ್ನವೀರೇಶ್ವರ ವಿರಕ್ತ ಮಠದ ಶ್ರೀ ಶಿವಯೋಗಿಶ್ವರ ಸ್ವಾಮಿಗಳು ಹಾಗೂ ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಶ್ರೀ ಬಸವಣ್ಣಜ್ಜ ವಹಿಸುವರು.

ಶಾಸಕ ಎಂ.ಆ‌ರ್. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಗ್ರಾಮಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಮಡಿವಾಳರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕುಸುಮಾವತಿ ಶಿವಳ್ಳಿ ಎಂ.ಎಸ್. ಅಕ್ಕಿ, ಶಂಕರಗೌಡ್ರ ನಿರಂಜನಗೌಡ್ರ, ಶಿವಾನಂದ ಅಂಬಿಗೇರ, ಜಗದೀಶ ಕಮ್ಮಾರ ಇನ್ನಿತರರು ಪಾಲ್ಗೊಳ್ಳುವರು.