ಕುಂದಗೋಳ : ಕಳೆದ ಒಂದು ತಿಂಗಳಿನಿಂದ ಅನಧಿಕೃತ ರಜೆ ಇರುವ, ಅತಿವೃಷ್ಟಿ ಸಮಯದಲ್ಲೂ ಸೂಕ್ತ ಸ್ಪಂದನೆ ನೀಡದ ಸಂಶಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಗಿಣಿವಾಲದ ಅವರನ್ನೂ ತಕ್ಷಣ ಅಮಾನತ್ತು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಜಿಪಂ ಸಿಇಒ ಸ್ವರೂಪ ಟಿಕೆ ಅವರಿಗೆ ಆದೇಶಿಸಿದ್ದಾರೆ.

ಇಂದು ಧಾರವಾಡದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ 2024ನೇ ಸಾಲಿನ ಮುಂಗಾರು ಹಂಗಾಮಿನ ಮುನ್ನೆಚ್ಚರಿಕೆ ಅಗತ್ಯ ಕ್ರಮಗಳ ಸಭೆಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಮೇಲಾಧಿಕಾರಿಗಳ ಸರಿಯಾದ ಮಾಹಿತಿ ನೀಡದೇ, ಅನುಮತಿ ಪಡೆಯದೆ, ಕಳೆದ ಒಂದು ತಿಂಗಳಿನಿಂದ ಸಂಶಿ ಗ್ರಾಮ ಪಂಚಾಯಿತಿಗೆ ಗೈರಾದ ಪಿಡಿಓ ನಾಗರಾಜ್ ಗಿಣಿವಾಲದ ಅವರನ್ನೂ ಅಮಾನತು ಮಾಡಬೇಕೆಂದು ಆದೇಶ ನೀಡಿದ್ದಾರೆ.

ಅದರಂತೆ ಪಿಡಿಓ ಕಾರ್ಯವೈಖರಿ ಬಗ್ಗೆ ಉದಾಸೀನತೆ ತೋರಿದ ಸ್ಥಳೀಯ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸಚಿವರು ತಿಳಿಸಿದ್ದಾರೆ.