ಹುಬ್ಬಳ್ಳಿ : ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಪ್ರಹ್ಲಾದ್ ಜೋಶಿ ಸೇರಿದಂತೆ ಇನ್ನಿತರ ಬಿಜೆಪಿಗರು ಆರೋಪ ಮಾಡುತ್ತಿದ್ದು, ಪ್ರಹ್ಲಾದ್ ಜೋಶಿ ಭಯೋತ್ಪಾದಕ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
2022ರಲ್ಲಿ ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಯೋತ್ಪಾದಕರಿಗೆ ಸರ್ಕಾರ ಸಪೋರ್ಟ್ ಮಾಡುತ್ತಿದೆ ಎಂದಿದ್ದರು. ಅವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಸಿಎಂ ಪ್ರತ್ಯುತ್ತರ ನೀಡಿದ್ದಾರೆ.
ಪ್ರಕರಣ ಹಿಂಪಡೆದ ಸಚಿವ ಸಂಪುಟದ ತೀರ್ಮಾನವು ಕೋರ್ಟ್ ಮುಂದೆ ಹೋಗಬೇಕು. ಅಲ್ಲಿ ಒಪ್ಪಿಗೆ ಸಿಕ್ಕರೆ ಮಾತ್ರ ಪ್ರಕರಣ ಹಿಂಪಡೆಯಲು ಸಾಧ್ಯವಾಗುತ್ತದೆ. ಅದು ಬಿಟ್ಟು ಸುಖಾಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು. ಇಷ್ಟು ಮಾತನಾಡುವ ಬಿಜೆಪಿಯವರು ಏನ್ ಕಡಿಮೆ ಇಲ್ಲ. ಅವರು ಸಹ ಈ ರೀತಿ ಅನೇಕ ಪ್ರಕರಣಗಳನ್ನು ವಿತ್‌ಡ್ರಾ ಮಾಡಿದ್ದರು ಎಂದು ಸಿಎಂ ಚಾಟಿ ಬೀಸಿದರು.

