ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್ ವಿಚಾರ, ನಾಗೇಂದ್ರ ರಾಜೀನಾಮೆ ಕೊಡಬೇಕು, ಆತನನ್ನ ಅರೆಸ್ಟ್ ಮಾಡಬೇಕೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಬ್ಯಾಂಕ್ ಮೂಲಕ ಎಲ್ಲ ವ್ಯವಹಾರ ಆಗಿದೆ. ಅವರು ಏನೇನು ಮಾಡಬೇಕು ಅದೆಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸಾಕ್ಷಿ ನಾಶ, ಬೆದರಿಸೋ ಕೆಲಸ ಆಗುತ್ತಿದೆ. ಕೂಡಲೇ ಆತನನ್ನು ಬಂಧಿಸಬೇಕು, ರಾಜೀನಾಮೆ ಪಡೆಯಬೇಕು, ಇನ್ನು ಸಿಬಿಐ ನಂತ ಸಂಸ್ಥೆ ತನಿಖೆ ಮಾಡಬೇಕು ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ 100 ಪರ್ಸೆಂಟ್ ಭ್ರಷ್ಟಾಚಾರದಲ್ಲಿದೆ. ಗುತ್ತಿಗೆದಾರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ್ ಪಾಟೀಲ್ ಮಾದರಿಯಲ್ಲಿ ಆತ್ಮಹತ್ಯೆ ಆಗಿದೆ. ಇನ್ನೊಂದು ಕಡೆ ಚೆಕ್ ಮೂಲಕ ಭ್ರಷ್ಟಾಚಾರ ಆಗಿದೆ. ಇದಕ್ಕಿಂತ ಗಂಭೀರತೆ ಏನು ಬೇಕು. ಹಿಂದೆ ಇಂದಿರಾಗಾಂಧಿ ಕಾಲದಲ್ಲಿ ನಗರವಾಲಾ ಪ್ರಕರಣ ಆಗಿತ್ತು. ಇದು ಅದಕ್ಕೆ ಹೋಲುತ್ತೆ ಎಂದರು.

