ಹುಬ್ಬಳ್ಳಿ : ತ್ಯಾಗ ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಅಣ್ಣಿಗೇರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದೂ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಹಬ್ಬ ಆಚರಣೆ ಮಾಡಿರುವ ದೃಶ್ಯಗಳು ಅಣ್ಣಿಗೇರಿನಲ್ಲಿ ಕಂಡು ಬಂದವು.

ಇನ್ನು ಅಲೈ ದೇವರ ಪಂಜಾಗಳಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಇನ್ನು ತಾಲೂಕಿನ ಭದ್ರಾಪುರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಲೈ ದೇವರ ಪಾಂಜಾಗಳ ಅದ್ದೂರಿ ಮೆರವಣಿಗೆ ಸಾಗಿದವು. ದೇವರ ಮುಂದೆ ಹಿಂದೂ ಮುಸ್ಲಿಂ ಯುವಕರು ಬಾಂಧವ್ಯದಿಂದ ಹೆಜ್ಜೆ ಹಾಕಿ ಮೆರವಣಿಗೆಗೆ ಮೆರವು ತಂದರು.