ಅಣ್ಣಿಗೇರಿ: ಪ್ರಸ್ತುತ ವರ್ಷ ಮಲಪ್ರಭಾ ರೇಣುಕಾಸಾಗರ ಇಂದಿರಾಗಾಂಧಿ ಅಣೆಕಟ್ಟು ಭರ್ತಿಯಾಗಿರುವುದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನತೆಗೆ ತುಂಬಾ ಸಂತಸದ ವಿಷಯವಾಗಿದ್ದು ಅದರ ಪ್ರಯುಕ್ತವಾಗಿ ಇಂದು ಪವಿತ್ರ ಕ್ಷೇತ್ರವಾದ ಸವದತ್ತಿಯ ಶ್ರೀ ಯಲ್ಲಮ್ಮ ದೇವಿಗೆ ಸಚಿವರು ಹಾಗೂ ICIC ಸಮೀತಿಯ ಅಧ್ಯಕ್ಷರಾದ ಲಕ್ಷ್ಮಿ ಹೆಬ್ಬಾಳ್ಳ‌ರ್ ಅವರೊಂದಿಗೆ ಶಾಸಕ ಕೋನರಡ್ಡಿ ಅವರು ಪೂಜೆ ಸಲ್ಲಿಸಿ ಆ ದೇವಿಯ ಕೃಪೆಗೆ ಪಾತ್ರರಾದರು.

ನಂತರ ಮಲಪ್ರಭಾ ರೇಣುಕಾಸಾಗರ ಇಂದಿರಾಗಾಂಧಿ ಆಅಣೆಕಟ್ಟಿಗೆ ತೆರಳಿ ಜಲಗಂಗೆಗೆ ಪೂಜೆ ಸಲ್ಲಿಸಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ನರಗುಂದ ಕ್ಷೇತ್ರದ ಶಾಸಕರು ಸಿ.ಸಿ. ಪಾಟೀಲ, ಸವದತ್ತಿ ಕ್ಷೇತ್ರದ ಶಾಸಕರು ವಿಶ್ವಾಸ ವೈಧ್ಯ, ಬದಾಮಿ ಕ್ಷೇತ್ರದ ಶಾಸಕರು ಬಿ.ಬಿ. ಚಿಮ್ಮನಕಟ್ಟಿ, ನೀರುಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಮುಖ್ಯ ಇಂಜಿನೀಯರ ವಾಸನದ,

ಸ (5)

ಸುಪರಿಟೆಂಡೆಂಟ್ ಇಂಜಿನೀಯರ ಮಧುಕರ ಹಾಗೂ ಶ್ರೀನಿವಾಸ ಮಲ್ಲಿಗವಾಡ, ಮಹಾಮಂಡಳದ ನಿರ್ದೇಶಕರುಗಳಾದ ಗುರುಪಾದಪ್ಪ ಕುರಹಟ್ಟಿ, ಸುರೇಶ ನಿಡುವಣಿ, ವೀರಣ್ಣ ಚುಳಕಿ, ಕುಮಾರ ಲಟ್ಟಿ, ಬಿ.ವಾಯ್. ಕಾಡಪ್ಪನವರ, ಬಿ.ಎ. ಚಿಕ್ಕಮಠ, ಪಿ.ವಾಯ್ ಪೂಜಾರ, ರೈತ ಮುಖಂಡರುಗಳಾದ ಎಂ.ಎಸ್. ರೋಣದ, ಎಸ್.ವಿ. ಬಳಿಗೇರ, ಶಂಕ.ಪ ಗಾಣಿಗೇರ, ಪ್ರಕಾಶ ಕೊಣೂರ ಇತರರು ಉಪಸ್ಥಿತರಿದ್ದರು.