ನವಲಗುಂದ: ಜುಲೈ 21ರಂದು ನಡೆಯುವ ರೈತ ಹುತಾತ್ಮ ದಿನಾಚರಣೆಯ ನಿಮಿತ್ತ ನಗರದಲ್ಲಿರುವ ರೈತ ಭವನಕ್ಕೆ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ ನೀಡಿದರು.
ಇನ್ನೂ ಅಂದಿನ ದಿನ ರಾಜ್ಯದ ನಾನಾ ಭಾಗಗಳಿಂದ ರೈತ ಹೋರಾಟಗಾರರು ಆಗಮಿಸಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಭದ್ರತೆ ಸೇರಿದಂತೆ ಅನೇಕ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸುಧೀರ ಸಾಹುಕಾರ, ಇಓ ಭಾಗ್ಯಶ್ರೀ ಜಾಹಗೀರದಾರ, ಸಿಪಿಐ ರವಿ ಕಪ್ಪತ್ತನವರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರು ಸೇರಿದಂತೆ ಅನೇಕರು ಇದ್ದರು.

