ಕಲಘಟಗಿ: ತಾಲೂಕು ವಕೀಲರ ಸಂಘದ ನೂತನ ಅಣ್ಣಪ್ಪ ಟಿ ಓಲೇಕಾರ ಆಯ್ಕೆಯಾಗಿದ್ದಾರೆ ನಡೆದ ಅಧ್ಯಕ್ಷ ಆಯ್ಕೆಯ ಚುನಾವಣೆಯಲ್ಲಿ ಬಹುಮತ ಪಡೆದು ಆಯ್ಕೆಯಾಗಿದ್ದಾರೆ.

ಇವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದ ವಿ ಬಿ ಶಿವನಗೌಡ್ರ ಮತ್ತು ಮಂಜುನಾಥ್ ದನಿಗೊಂಡ ಕಡಿಮೆ ಮತಗಳನ್ನ ಪಡೆದು ಪರಾಭವಗೊಂಡರು.

ವಕೀಲರ ಸಂಘಕ್ಕೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಕೆ ಬಿ ಗುಡಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಸಿ ಬಿ ಧಾಸ್ತಿಕೊಪ್ಪ, ಖಜಾಂಚಿಯಾಗಿ ಶೋಭಾ ಬಳಿಗಾರ, ಮಹಿಳಾ ಪ್ರತಿನಿಧಿಯಾಗಿ ಗೀತಾ ಮಟ್ಟಿ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಬಿ ವಿ ಪಾಟೀಲ್‌ ಆರ್ ಎಸ್ ಉಡುಪಿ, ಎಸ್ ಟಿ ತೆಗ್ಗಿಹಳ್ಳಿ ಎಸ್ ಜೆ ಸುಂಕದ, ಎಂ ಎಂ ಚಲವಾದಿ, ಎಸ್ ಎನ್ ಉಪಾಧ್ಯ ಎಸ್ ಜಿ ಕುಲಕರ್ಣಿ ಜಿ ಬಿ ಕರಲಟ್ಟಿ, ಎನ್ ಎಂ ಇಂಗಳಗಿ, ಆ‌ರ್ ಕೆ ಮಲ್ಲಾಡದ ಸೇರಿದಂತೆ ಹಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.