ಹುಬ್ಬಳ್ಳಿ : ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕೆಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಸಿ ಸಿಐಡಿ ಡಿಜಿ ಅವರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಅಂಜಲಿ ಹತ್ಯೆಯ ಹಿಂದೆ ಇನ್ನೂ ಆರೋಪಿಗಳಿದ್ದಾರೆ. ಆ ಆರೋಪಿಯ ರಕ್ಷಣೆಗೆ ಮಹಾನಾಯಕನೊಬ್ಬ ನಿಂತಿದ್ದಾನೆ. ಆ ಆರೋಪಿಯ ಹೆಸರು ಹೇಳದಂತೆ ಅಂಜಲಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಅಂಜಲಿ ಕೊಲೆಯಾದ ಅಂಜಲಿ ಕುಟುಂಬಕ್ಕೆ ಸಹಾಯದ ನೆಪದಲ್ಲಿ ಅವನ ಹೆಸರು ಹೇಳದಂತೆ ಧಮ್ಮಿ ಹಾಕಿದ್ದಾರೆ ಎಂದು ಆರೋಪ ಮಾಡಿದರು.

