ಧಾರವಾಡ : ವಿದ್ಯುತ್ ತಂತಿ ತಗುಲಿ ಎಮ್ಮೆ ಹಾಗೂ ಅದರ ಕರು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಸಂಭವಿಸಿದೆ.

ರೈತ ಮಡಿವಾಳಪ್ಪ ಎಂಬುವವರಿಗೆ ಸೇರಿದ ಜಾನುವಾರುಗಳು ಸಾವನ್ನಪ್ಪಿವೆ ಎಂಬ ಮಾಹಿತಿ ತಿಳಿದು ಬಂದಿದೆ. ಎಮ್ಮೆ ಮೇಯಿಸಲು ಹೋದ ಸಂದರ್ಭದಲ್ಲಿ ಬೋರವೆಲ್ ಮೋಟರ್ ಸ್ಟಾರ್ಟ್ ಮಾಡುವ ಬೋರ್ಡ್‌ನಲ್ಲಿದ್ದ ವಿದ್ಯುತ್‌ ತಂತಿ ಜಾನುವಾರುಗಳಿಗೆ ತಗುಲಿದೆ. ಇದರಿಂದ ಎರಡೂ ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.