ಧಾರವಾಡ: ಹುಬ್ಬಳ್ಳಿ ಮೂಲದ ಸರ್ವಮಂಗಳ ವಕ್ಕುಂದ ಎಂಬ ವೃದ್ಧೆ ಬ್ಯಾಗ್ನ್ನು ಇತ್ತೀಚೆಗೆ ಕಳೆದುಕೊಂಡಿದ್ದರು. ಆ ಬಗ್ಗೆ ಅವರು ಧಾರವಾಡ ಶಹರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ದೂರು ದಾಖಲಾದ ಕೆಲವೇ ದಿನಗಳಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಚಿನ್ನವಿದ್ದ ಬ್ಯಾಗ್ನ್ನು ಪತ್ತೆ ಮಾಡಿ ಮರಳಿ ಆ ವಯೋವೃದ್ಧರಿಗೆ ಹಸ್ತಾಂತರಿಸುವ ಮೂಲಕ ಮೆಚ್ಚುಗೆ ಕಾರ್ಯ ಮಾಡಿದ್ದಾರೆ.
ಅಂದಾಜು 5.5 ಲಕ್ಷ ಮೌಲ್ಯದ 70 ಗ್ರಾಂ ಚಿನ್ನದ ಸಾಮಾನುಗಳಿದ್ದ ಬ್ಯಾಗ್ನ್ನು ಧಾರವಾಡದ ಗಾಂಧಿ ಸರ್ಕಲ್ ಬಳಿ ಕಳೆದುಕೊಂಡಿದ್ದರು. ಆ ಬ್ಯಾಗ್ ಕಳೆದುಕೊಂಡ ನಂತರ ಅವರು ಶಹರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಸಿಪಿಐ ಎನ್.ಸಿ.ಕಾಡದೇವರಮಠ, ಪಿಎಸ್ಐ ಚಂದ್ರಶೇಖರ ಮದರಖಂಡಿ, ಕ್ರೈಂ ಸಿಬ್ಬಂದಿಯಾದ ಎಂ.ಬಿ.ಗೆದ್ದಿಕೇರಿ, ಡಿ.ವಿ.ಘಾಳರೆಡ್ಡಿ, ಜಿ.ಜಿ.ಚಿಕ್ಕಮಠ, ಪಿ.ಬುರ್ಜಿ, ಪ್ರವೀಣ ತಿರ್ಲಾಪುರ ಅವರು ಆ ಬ್ಯಾಗ್ನ್ನು ಪತ್ತೆ ಮಾಡಿ ಅದನ್ನು ಮರಳಿ ವಯೋವೃದ್ಧರಿಗೆ ಹಸ್ತಾಂತರಿಸಿದ್ದಾರೆ.

