ದಾವಣಗೆರೆ: ನಿರ್ಮಾಣ ಹಂತದ ಕಟ್ಟಡವೊಂದರ ತೊಟ್ಟಿಗೆ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಚಿನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಅವಾಜ್ ಖಾನ್ (6) ಎಂದು ಗುರುತಿಸಲಾಗಿದೆ. ಮೃತ ಬಾಲಕ ಸಂತೆಬೆನ್ನೂರು ಗ್ರಾಮದ ಫುಟ್ ವೇರ್ ಅಂಗಡಿ ಮಾಲೀಕ ಅಪ್ತಾಬ್ ಖಾನ್ ಅವರ ಮಗ ಮೂತ್ರ ವಿಸರ್ಜನೆ ತೆರಳಿದ್ದ ವೇಳೆ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಮಗ ಹೋಗಿ ಇಷ್ಟು ಹೊತ್ತು ಆದರೂ ಬಾರದ ಹಿನ್ನಲೆ ಹೊರಗೆ ಬಂದು ನೋಡಿದಾಗ ನೀರಿನ ತೊಟ್ಟಿಯ ಬಳಿ ಚಪ್ಪಲಿ ಬಿದ್ದಿರುವುದು ಕಾಣಿಸಿದೆ. ಈ ವೇಳೆ ಸ್ವಲ್ಪ ಮುಂದೆ ಹೋಗಿ ನೋಡಿದಾಗ ತೊಟ್ಟಿಯಲ್ಲಿ ಬಾಲಕ ತೇಲುತ್ತಿರುವುದು ಗಮನಿಸಿದ್ದಾರೆ. ಕೂಡಲೇ ಮಗನನ್ನು ಮೇಲಕ್ಕೆ ತೆಗೆದು ನೋಡಿದಾಗ ಬಾಲಕ ಮೃತಪಟ್ಟಿರುವುದು ಗೊತ್ತಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

