ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನ ಮೂರನೇ ಮಹಡಿಯಿಂದ ಕೆಳಗಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ದೀಪಾವಳಿ ಹಬ್ಬದ ದಿನವೇ ಜಿಟಿ ಮಾಲ್‌ನಲ್ಲಿ ಈ ದುರಂತ ಸಂಭವಿಸಿದೆ. ರಾಜಧಾನಿಯ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ಈ ಘಟನೆ ನಡೆದಿದ್ದು, ಮಾಲ್ನ ಮೂರನೇ ಫ್ಲೋರ್ನಿಂದ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಮಾಗಡಿ ರೋಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಳಿಕ ಜಿಟಿ ಮಾಲ್ಗೆ ಇಂದು ಸಾರ್ವಜನಿಕರ ಪ್ರವೇಶ ನಿರ್ಬಂಧ ಮಾಡಲಾಗಿದೆ. ಪೊಲೀಸರು ಮಾಲ್ನ ಗೇಟ್ ಕ್ಲೋಸ್ ಮಾಡಿಸಿದ್ದಾರೆ.
ಮಾಲ್ ಮಧ್ಯದಲ್ಲಿ ಮೃತದೇಹ ಬಿದ್ದಿದ್ದು, ಸ್ಥಳಕ್ಕೆ ಸೋಕೋ ಟೀಮ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಲ್ಗೆ ಬಂದಿದ್ದ ವ್ಯಕ್ತಿ ಆಯ ತಪ್ಪಿ ಬಿದ್ದರೇ ಅಥವಾ ತಾನೇ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾದರೇ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

