ತಮಿಳುನಾಡು: ಕಿರಾತಕನ ಕೃತ್ಯಕ್ಕೆ ಸೆಕ್ಸ್ ವರ್ಕರ್ ಸ್ಮಶಾನ ಸೇರಿದ ಘಟನೆಯೊಂದು ನೆರೆಯ ರಾಜ್ಯದಲ್ಲಿ ನಡೆದಿದೆ. ಭೀಕರ ಕೊಲೆ ಆರೋಪಿ ಮಣಿಕಂದನ್ಎಂದು ತಿಳಿದು ಬಂದಿದೆ.
ಮಣಿಕಂದನ್ ಕಳೆದೆರಡು ದಿನಗಳ ಹಿಂದೆ ಬ್ರೋಕರ್ ಒಬ್ಬರ ಮೂಲಕ ಸೆಕ್ಸ್ ವರ್ಕರ್ ಅನ್ನ ಮನೆಗೆ ಕರೆಸಿಕೊಂಡಿದ್ದ. ಬಂದವಳ ಹೆಸರು ದೀಪಾ, ಮನಾಲಿ ಮೂಲದವಳು. ಇಬ್ಬರು ಕೆಲ ಕಾಲ ಚೆನ್ನಾಗಿಯೇ ಇದ್ರೂ, ಬಳಿಕ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಫೈಟ್ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಣಿಕಂದನ್, ದೀಪಾ ಮೇಲೆ ಸುತ್ತಿಗೆಯಿಂದ ಹೊಡೆದು ಹಲ್ಲೆ ಮಾಡಿ ಕೊಲೆಗೈದಿದ್ದಾನೆ.
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಹಿಳೆ ದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಿದ್ದ, ಶವ ಪತ್ತೆಯಾಗಿದೆ. ದೊರೈಪಕ್ಕಂ ಪ್ರದೇಶದಲ್ಲಿ ಅನಾಥವಾಗಿ ಸೂಟ್‌ಕೇಸ್ ಒಂದು ಬಿದ್ದಿದ್ದು, ಅದರಿಂದ ರಕ್ತ ಸೋರುತ್ತಿದೆ ಎಂದು ಚೆನ್ನೈನ ಕುಮಾರನ್ ಕುಡಿಲ್‌ನ ನಿವಾಸಿಯೊಬ್ಬರು ಮುಂಜಾನೆ 5.30ರ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂಟ್‌ಕೇಸ್ ಪತ್ತೆಯಾದ ಜಾಗದಿಂದ ಕೇವಲ ನೂರು ಮೀಟರ್ ದೂರದಲ್ಲಿ ವಾಸವಿರುವ 23 ವರ್ಷದ ಮಣಿಕಂಠ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ದೀಪಾ ತನ್ನಿಂದ ಹೆಚ್ಚು ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಇಬ್ಬರ ನಡುವೆ ತೀವ್ರ ಜಗಳ ನಡೆದಿತ್ತು. ಬಳಿಕ ಕೋಪಗೊಂಡು ಸುತ್ತಿಗೆಯಿಂದ ತಲೆಗೆ ಬಾರಿಸಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಣಿಕಂದನ್ ತಿಳಿಸಿದ್ದಾನೆ. ನಂತರ ಆಕೆಯ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಸೂಟ್‌ಕೇಸ್‌ನೊಳಗೆ ತುಂಬಿಸಿದ್ದ ಮಣಿ, ಸೂಟ್‌ಕೇಸ್ ಅನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾದೆ ಎಂಬುದನ್ನ ವಿಚಾರಣೆಯಲ್ಲಿ ಹೇಳಿದ್ದಾನೆ.

