ಮೈಸೂರು : ಅನೈತಿಕ ಸಂಬಂಧಕ್ಕೆ ಮಹಿಳೆಯನ್ನು ಕೊಲೆ ಮಾಡಿ ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ ಘಟನೆ ಸಾಲಿಗ್ರಾಮ ತಾಲೂಕು ಭೇರ್ಯ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತ(20) ಕೊಲೆಯಾದ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಎಂಬಾತನಿಂದ ಕೃತ್ಯ ನಡೆಸಲಾಗಿದೆ. ಕೇರಳ ಮೂಲದ ವ್ಯಕ್ತಿಯನ್ನ ರಕ್ಷಿತಾ ವಿವಾಹವಾಗಿದ್ದರು. ಸಿದ್ದರಾಜು ಜೊತೆ ರಕ್ಷಿತಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು.
ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಸಿದ್ದರಾಜು ಕರೆದಿದ್ದನು. ಲಾಡ್ಜ್ ನಲ್ಲಿ ಕೊಲೆ ಮಾಡಿದ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದನು. ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಸಿಬ್ಬಂದಿಗೆ ಅನುಮಾನ ಉಂಟಾಗಿದೆ.
ಬ್ಲಾಸ್ಟ್ ಆದ ಮೊಬೈಲ್ ಎಲ್ಲಿ ಎಂದಿದ್ದಕ್ಕೆ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿದ್ದ. ಕಿಟಕಿಯಿಂದ ಎಸೆದಿರುವುದಾಗಿ ತಿಳಿಸಿ ಪರಾರಿಯಾಗಲು ಯತ್ನಿಸಿದನು. ಈ ವೇಳೆ ಸಿಬ್ಬಂದಿಯಿಂದ ಹುಡುಕಾಟ ನಡೆಸಿದರೂ ಮೊಬೈಲ್ ಸಿಗಲಿಲ್ಲ.
ಅನುಮಾನ ಬಂದು ಹೋಟೆಲ್ ಸಿಬ್ಬಂದಿಯಿಂದ ಪೊಲೀಸರಿಗೆ ಪೋನ್ ಮಾಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರ ಬಳಿ ಅಸಲಿ ವಿಷಯವನ್ನು ಆರೋಪಿ ಕಕ್ಕಿದ್ದಾನೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

