ಮೈಸೂರು: ಹಣಕಾಸಿನ ವಿಚಾರದಲ್ಲಿ ಮಹಿಳಾ ಉದ್ಯಮಿ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ ಆರೋಪದ ಹಿನ್ನಲೆ ನಿವೃತ್ತ ಎಸ್ಪಿ ಕೃಷ್ಣಪ್ಪ ಸೇರಿದಂತೆ ಮೂವರ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೃಪ್ತಿ. ಎನ್.ಶಾ ಎಂಬವರೇ ಪ್ರಕರಣ ದಾಖಲಿಸಿದವರು. ಚೇತನ್, ಯಶಸ್ವಿನಿ ಚೇತನ್ ಹಾಗೂ ನಿವೃತ್ತ ಎಸ್ಪಿ ಕೃಷ್ಣಪ್ಪ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ. ಜಯಲಕ್ಷ್ಮಿಪುರಂ ನ ಟೆಂಪಲ್ ರಸ್ತೆಯಲ್ಲಿರುವ ಅರ್ಬನೈಟ್ ಇನ್ಫ್ರಾಸ್ಟ್ರಕ್ಚರ್ ನಲ್ಲಿ ಚೇತನ್ ರವರೊಂದಿಗೆ ತೃಪ್ತಿ ಎನ್ ಶಾ ರವರು ಪಾಲುದಾರರಾಗಿದ್ದರು.

ವ್ಯವಹಾರದಲ್ಲಿ ನಷ್ಟವಾದ ಹಣಕಾಸಿನ ವಿಚಾರದಲ್ಲಿ ಚೇತನ್ ಹಾಗೂ ತೃಪ್ತಿ ನಡುವೆ ವಿವಾದ ಇತ್ತು. ಈ ಸಂಬಂಧ ಚೇತನ್ ಹಾಗೂ ಇವರ ಪತ್ನಿ ಯಶಸ್ವಿನಿ ಚೇತನ್ ಮತ್ತು ನಿವೃತ್ತ ಎಸ್ಪಿ ಕೃಷ್ಣಪ್ಪ ಇತರರೊಂದಿಗೆ ಬಂದು ಹಲ್ಲೆ ನಡೆಸಿದ್ದಲ್ಲದೆ ಹಣ ಕೇಳಿದ್ರೆ ಜಾತಿ ನಿಂದನೆ ಕೇಸ್ ಹಾಕುವ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ತೃಪ್ತಿ ಎನ್ ಶಾ ರವರು ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡೂ ಕಡೆಯಿಂದ ಎಫ್‌ ಐ ಆರ್ ದಾಖಲಾಗಿದೆ.