ಜೈಪುರ: ರಾಜಸ್ಥಾನದ ಹನುಮಾನ್‌ಗಢದಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದಿದ್ದಾಳೆ. ಬಳಿಕ, ಪತಿಯ ಶವವನ್ನು ಮನೆಯ ಶೌಚಾಲಯದಲ್ಲಿ ಹೂತಿಟ್ಟಿದ್ದಾಳೆ. ಈ ವಿಷಯ ಬೆಳಕಿಗೆ ಬಂದಾಗ ಇಡೀ ಪ್ರದೇಶವೇ ಬೆಚ್ಚಿ ಬಿದ್ದಿದೆ. ಆ ಗ್ರಾಮದ ರೂಪರಾಮ್ 16 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತ ಬೇರೆ ಊರಿಗೆ ಹೋಗಿರಬಹುದು ಅಕ್ಕಪಕ್ಕದವರು ಅಂದುಕೊಂಡಿದ್ದರು.
ಆದರೆ, ರೂಪರಾಮ್ ನಾಪತ್ತೆಯ ಹಿಂದೆ ಆತನ ಹೆಂಡತಿಯ ಕೈವಾಡವಿರಬಹುದು ಎಂದು ಆತನ ಪೋಷಕರಿಗೆ ಅನುಮಾನ ಬಂದಿತ್ತು. ಹೀಗಾಗಿ, ಈ ಬಗ್ಗೆ ಮೃತ ರೂಪಾರಾಮ್ ಕುಟುಂಬಸ್ಥರು ಠಾಣೆಗೆ ಅರ್ಜಿ ಸಲ್ಲಿಸಿದ್ದರು. ಇಷ್ಟೆಲ್ಲಾ ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬಸ್ಥರು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಳಿಕ ಪೊಲೀಸರು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

