ಉತ್ತರ ಪ್ರದೇಶ: ಮಾಂಸದಡುಗೆ ಊಟ ಹಾಕು ಎಂದ ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದ ಪತ್ನಿ ಬಳಿಕ ಆತನ ಮೆದುಳಿನ ಮಾಂಸವನ್ನೇ ಬಗೆದು ಹೊರತೆದಿರುವಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಹಾಜಹಾನ್‌ಪುರದಲ್ಲಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ಭೀಭತ್ಸವಾಗಿದೆ. ಇಟ್ಟಿಗೆಯಿಂದ  ತಲೆಗೆ ಹೊಡೆದು ಹೊಡೆದು ಮಹಿಳೆ ತನ್ನ ಗಂಡನನ್ನು ಕೊಂದೇ ಬಿಟ್ಟಿದ್ದಾಳೆ.

ಗಂಡನ ತಲೆಯಿಂದ ಮಿದುಳು ಹೊರಗೆ ಬರುವವರೆಗೂ ಮಹಿಳೆ ಇಟ್ಟಿಗೆಯಿಂದ ಹೊಡೆದಿದ್ದಾಳೆ. ಬಳಿಕ ಗಂಡನ ದೇಹದ ಮೇಲೆ ಕುಳಿತು ಆತನ ತಲೆಯಿಂದ ಮಿದುಳು ಮಾಂಸವನ್ನು ಬಗೆದು ಹೊರಗೆ ತೆಗೆದಿದ್ದಾಳೆ. ನಾನು ಇವತ್ತು ನಿನ್ನ ತಲೆ ಹುಡಿ ಮಾಡುತ್ತೇನೆ ಎಂದು ಮಧ್ಯೆ ಮಧ್ಯೆ ಬೊಬ್ಬೆ ಹೊಡೆದು ಕಿರುಚುತ್ತಾ ಆಕೆ ಗಂಡನ ತಲೆ ಒಡೆದಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಹಿಳೆ ಮಾತ್ರ ಸುಮ್ಮನಿರದೇ ಪೊಲೀಸರ ಮುಂದೆಯೇ ಗಂಡನ ಮಿದುಳು ಬಗೆಯುವ ಕೃತ್ಯ ಮುಂದುವರೆಸಿದ್ದಾಳೆ. ಈ ಎಲ್ಲಾ ದೃಶ್ಯ ಸಿಸಿ ಕ್ಯಾಮಾರ ಹಾಗು ನೆರೆದಿದ್ದವರ ಮೊಬೈಲ್‌ ನಲ್ಲಿ ಸೆರೆಯಾಗಿದೆ. ಸದ್ಯ  ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿದೆ.

ಶಹಾಜಹಾನ್‌ಪುರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.  ಭೀಕರವಾಗಿ ಕೊಲೆಯಾದ ವ್ಯಕ್ತಿಯನ್ನು 40 ವರ್ಷದ ಸತ್ಯಪಾಲ್‌ ಎಂದು ಗುರುತಿಸಲಾಗಿದೆ. ಹಾಗೆಯೇ ಕೊಲೆ ಮಾಡಿದ ಮಹಿಳೆಯನ್ನು  39 ವರ್ಷದ ಗಾಯತ್ರಿ ದೇವಿ ಎಂದು ಗುರುತಿಸಲಾಗಿದೆ.