ಮೈಸೂರು : ಸೋಲುವ ಮ್ಯಾಚನ್ನ ಸಿಕ್ಸರ್ ಹೊಡೆದು ಗೆಲ್ಲಿಸಿದ್ದಕ್ಕೆ ನಡೆಯಿತಾ ಕೊಲೆ..? ಎಂದು ಕುಟುಂಬಸ್ಥರಿಂದ ಗಂಭೀರ ಆರೋಪ ಮಾಡಲಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ‌ ವಡ್ಡರಗುಡಿ ಗ್ರಾಮದ ದಿವ್ಯಾ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿ. ಕಳೆದ ತಿಂಗಳ 24 ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು.

ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿತ್ತು. ಜೆಪಿ ವಾರಿಯರ್ಸ್ ತಂಡದ ಪರ ಕ್ರಿಕೆಟ್ ಕುಮಾರ್ ಆಡಿದ್ದನು. ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಪೈನಲ್ ಪಂದ್ಯಾವಳಿಯಲ್ಲಿ ಕುಮಾರ್ ಉತ್ತಮ‌ ಪ್ರದರ್ಶನ ನೀಡಿದ್ದನು.

4 ಬಾಲ್ ಗೆ 20 ರನ್ ಹೊಡೆದು ದಿವ್ಯಾ ಕುಮಾರ್ ಪಂದ್ಯ ಗೆಲ್ಲಿಸಿದ್ದನು. ಮ್ಯಾಚ್ ಗೆದ್ದ ಬಳಿಕ ಟೀಂ ಸದಸ್ಯರು ಪಾರ್ಟಿ ಮಾಡಿದ್ದರು. ಬಳಿಕ ಪಾರ್ಟಿ ಮುಗಿಸಿ ಬೈಕ್ ನಲ್ಲಿ ದಿವ್ಯಾ ಕುಮಾರ್‌ ತೆರಳಿದ್ದರು. ಇದಾದ ಬಳಿಕ ಅಪಘಾತದ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ದಿವ್ಯಾ ಕುಮಾರ್ ಕೋಮ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿದ್ದರು. ಘಟನೆ ಬಗ್ಗೆ ಕುಟುಂಬಸ್ಥರಿಂದ ಅನುಮಾನ ವ್ಯಕ್ತವಾಗಿದೆ. ಮೊದಲಿಗೆ ಬೈಕ್ ಅಪಘಾತ ನಡೆದಿದೆ ಎಂದುಕೊಂಡಿದ್ದೆವು. ಆದ್ರೆ ಬೈಕ್ ಅಪಘಾತ ಅನುಮಾನಾಸ್ಪದವಾಗಿ ಇತ್ತು. ಇದರಿಂದ ಕ್ರಿಕೆಟ್ ಗೆಲ್ಲಿಸಿದ್ದ ಎಂಬ ಕಾರಣಕ್ಕೆ ದ್ವೇಷದಿಂದ ಹೊಡೆದಿರುವ ಸಾಧ್ಯತೆ ಇದೆ.

ದಿವ್ಯಾ ಕುಮಾರ್ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟ್ ಪ್ಲೇಯರ್ ಆಗಿದ್ದ. ಸಾಕಷ್ಟು ತಂಡಗಳು ಈತನನ್ನು ಸೇರಿಸಿಕೊಂಡು ಕ್ರಿಕೆಟ್ ಆಡುತ್ತಿದ್ದರು. ಇದರಿಂದ ಈತನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ಇದೆ. ಪೊಲೀಸರು ಸಹ ಸರಿಯಾದ ರೀತಿಯಲ್ಲಿ‌ ತನಿಖೆ ಮಾಡುತ್ತಿಲ್ಲ ಎಂದು ಕುಟುಂಬಸ್ಥರ ಆರೋಪ ಕೇಳಿಬಂದಿದೆ.

ಕಳೆದ 20 ದಿನಗಳಿಂದಲು ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲೆ ದಿವ್ಯಾ ಕುಮಾರ್ ಇದ್ದನು. ನಿನ್ನೆ ಆಸ್ಪತ್ರೆಯಲ್ಲಿ ದಿವ್ಯಾ ಕುಮಾರ್ ಸಾವನಪ್ಪಿದ್ದಾರೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.