ಲಂಡನ್: ಫ್ರಾನ್ಸ್‌ನಿಂದ ಬಂದ ವ್ಯಕ್ತಿಯ ಸೂಟ್‌ಕೇಸ್‌ಗಳಲ್ಲಿ ಇಬ್ಬರು ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಬ್ರಿಟನ್‌ನ ಪ್ರಸಿದ್ಧ ಸೇತುವೆಯೊಂದರ ಕೆಳಗೆ ಎಸೆಯಲಾಗಿದ್ದ ಸೂಟ್ಕೇಸ್ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಇದರ ನಂತರ ಕೊನೆಗೂ ಕೊಲೆಗಾರನನ್ನು ಪೊಲೀಸರು ಕಂಡುಹಿಡಿದಿದ್ದಾರೆ.
ಕೊಲೆಯಾದ ವ್ಯಕ್ತಿಗಳಿಗೂ ಕೊಲೆಗಾರನಿಗೂ ಈ ಹಿಂದೆ ಸಂಬಂಧವಿತ್ತು. ಕೊಲೆಯಾದವರಿಬ್ಬರೂ ಸಲಿಂಗ ಕಾಮಿಗಳು. ಅವರಿಬ್ಬರೂ ಪಶ್ಚಿಮ ಲಂಡನ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗಾರನ ಬಗ್ಗೆ ಸುಳಿವು ಸಿಕ್ಕಿದ್ದರೂ ಕೊಲೆಯ ಹಿಂದಿನ ಕಾರಣ ಇನ್ನೂ ದೃಢಪಟ್ಟಿಲ್ಲ. ಪೊಲೀಸರು ಕೊಲೆಯಾದವರನ್ನು ಆಲ್ಬರ್ಟ್ ಅಲ್ಫೋನ್ಸೊ (62) ಮತ್ತು ಪಾಲ್ ಲಾಂಗ್‌ವರ್ತ್ (71) ಎಂದು ಗುರುತಿಸಿದ್ದು, ಇವರು ಫ್ರಾನ್ಸ್‌ನ ಬ್ರಿಟಿಷ್ ಪ್ರಜೆಗಳು ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ 34 ವರ್ಷದ ಕೊಲಂಬಿಯಾದ ಪ್ರಜೆ ಯೋಸ್ಟಿನ್ ಆಂಡ್ರೆಸ್ ಮೊಸ್ಕ್ವೆರಾ ಅವರನ್ನು ಶನಿವಾರ ಬ್ರಿಸ್ಟಲ್‌ನಲ್ಲಿ ಬಂಧಿಸಲಾಗಿದೆ ಮತ್ತು ಸೋಮವಾರ ಆರೋಪ ಹೊರಿಸಲಾಗಿದೆ ಎಂದು ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೊಸ್ಕ್ವೆರಾ ಕೂಡ ಕೊಲೆಯಾದವರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಸ್ವಲ್ಪ ಸಮಯದವರೆಗೆ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

