ಬ್ಯಾಂಕಾಕ್: ಪಿಸ್ತೂಲು ಆಕಾರದ ಲೈಟರ್‌ ಹಿಡಿದು ಸಾರ್ವಜನಿಕರನ್ನು ಬೆದರಿಸುತ್ತಿದ್ದ ಭಾರತೀಯ ವ್ಯಕ್ತಿಯೋರ್ವನನ್ನು  ಬಂಧಿಸಲಾಗಿದೆ.

ಇಲ್ಲಿನ ಸಿಯಾಮ್ ಚೌಕದಲ್ಲಿ ಪಿಸ್ತೂಲ್ ಆಕಾರದ ಲೈಟರ್‌ನಿಂದ ದಾರಿಹೋಕರನ್ನು ಬೆದರಿಸುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಆ ವ್ಯಕ್ತಿಯನ್ನು ಭಾರತೀಯ ಪ್ರಜೆ ಸಾಹಿಲ್ ರಾಮ್ ಥಡಾನಿ ಎಂದು ಗುರುತಿಸಲಾಗಿದೆ.

ಘಟನೆ ಸಂಬಂಧ ವೀಡಿಯೊದಲ್ಲಿ ಥಡಾನಿ ರಸ್ತೆಯಲ್ಲಿ ನೃತ್ಯ ಮಾಡುತ್ತ, ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬಂದಿದೆ. ವೀಡಿಯೋದಲ್ಲಿ ಭದ್ರತಾ ಸಿಬ್ಬಂದಿಗಳು ಈತನನ್ನು ಎಳೆದೊಯ್ದಾಗ ಕಿರುಚಾಟ ನಡೆಸುತ್ತಿರೋದು ಕಂಡುಬಂದಿದೆ.