ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಮಚ್ಚಿನ ಸದ್ದು ಕೇಳಿಬಂದಿದ್ದು, ಇಬ್ಬರು ಮಹಿಳೆಯರು, ಒಬ್ಬ ಪುರುಷರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಅಗ್ರಹಾರದ ರಾಮನುಜ ರಸ್ತೆಯಲ್ಲಿ ನಡೆದಿದೆ.

ಒಬ್ಬ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಡು ರಸ್ತೆಯಲ್ಲೆ ಕಾರಿನಲ್ಲಿ ಬಂದು ಹಲ್ಲೆಕೋರರು ಹಲ್ಲೆ ನಡೆಸಿದ್ದಾರೆ. ಆಟೋದಲ್ಲಿ‌ ಹೋಗುತ್ತಿದ್ದ ಇಬ್ಬರು ಮಹಿಳೆಯರು, ಒಬ್ಬ ಪುರುಷ ಇದ್ದ ಆಟೋವನ್ನ ಹಿಂದಿನಿಂದ ಕಾರು ಫಾಲೋ ಮಾಡಿ ಬಂದು ರಾಮನುಜ ರಸ್ತೆಯಲ್ಲಿ ಆಟೋ ಅಡ್ಡಗಟ್ಟಿ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ.

ಮಹಿಳೆಯರು ಕೂಗಾಡಿದ್ರು ಬಿಡದೆ ಹಂತಕರು ಹಲ್ಲೆ ನಡೆಸಿದ್ದಾರೆ. ನಡು ರಸ್ತೆಯಲ್ಲಿ ನಡೆದ ಘಟನೆಯಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಮಚ್ಚು ಹಿಡಿದು ರಾಜಾರೋಷವಾಗಿ ರಸ್ತೆಯಲ್ಲಿ ನಾವೇ ಕತ್ತರಿಸೋದು ಎಂದು ಹಂತಕರು ಕೂಗಿದ್ದಾರೆ.

ಭಯವಿಲ್ಲದೆ ನಡು ರಸ್ತೆಯಲ್ಲಿ ಇಬ್ಬರು ದುಷ್ಕರ್ಮಿಗಳು ಮಚ್ಚು ಹಿಡಿದಿದ್ದಾರೆ. ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.