ಗುಜರಾತ್: ಮಗನೊಬ್ಬ ತನ್ನ ಸ್ವಂತ ತಾಯಿಯನ್ನು ಬರ್ಬರವಾಗಿ ಕೊಂಡಿದ್ದಾನೆ. ತಕ್ಷಣ ಈ ವಿಚಾರವನ್ನು ಇನ್‌ಸ್ಟಾಗ್ರಾಮ್ ಮತ್ತು X ನಲ್ಲಿ ಪೋಸ್ಟ್ ಮಾಡಿದ್ದಾನೆ. ರಾಜ್ ಕೋಟ್ ನಲ್ಲಿ ಈ ದುಷ್ಕೃತ್ಯ ನಡೆದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನ್ನು ಬಂದಧಿಸಿದಾಗ ಈ ಕೊಲೆ ಹಿಂದೆ ಇರುವ ಕಾರಣ ಕೇಳಿ ಅಧಿಕಾರಿಗಳು ಬೆಚ್ಚಿ ಬಿದಿದ್ದಾರೆ.
ಮೃತ ಮಹಿಳೆಯನ್ನು ಜ್ಯೋತಿಬೆನ್ ಗೋಸೈನ್ ಎಂದು ಗುರುತಿಸಲಾಗಿದ್ದು, ಆರೋಪಿ ನೀಲೇಶ್. ತನ್ನ ಸ್ವಂತ ತಾಯಿಯನ್ನು ಕೊಂದು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕ್ಷಮೆ ಕೇಳಿದ್ದಾನೆ. ಆದರೆ ಮಗ ತನ್ನ ತಾಯಿಯನ್ನು ಏಕೆ ಕೊಂದನು? ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಬೆಳಕಿಗೆ ಬಂದ ಕಾರಣ ತಿಳಿದು ಬೆಚ್ಚಿಬಿದ್ದಿದ್ದಾರೆ.
ತಾಯಿಯನ್ನು ಕೊಂದ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ‘ನನ್ನನ್ನು ಕ್ಷಮಿಸಿ ತಾಯಿ, ನಾನು ನಿನ್ನನ್ನು ಕೊಂದಿದ್ದೇನೆ, ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ, ಓಂ ಶಾಂತಿ’ ಎಂದು ಶೀರ್ಷಿಕೆ ನೀಡಿದ್ದಾನೆ. ಇನ್ನೊಂದು ಪೋಸ್ಟ್ ನಲ್ಲಿ ನನ್ನ ತಾಯಿಯನ್ನು ಕೊಲ್ಲುತ್ತಿದ್ದೇನೆ, ಪ್ರಾಣ ಕಳೆದುಕೊಳ್ಳುತ್ತಿದ್ದೇನೆ, ಕ್ಷಮಿಸಿ ಅಮ್ಮ, ಓಂ ಶಾಂತಿ, ಐ ಮಿಸ್ ಯೂ ತಾಯಿ ಎಂದು ಸಂವೇದನಾಶೀಲ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

