ಬೆಂಗಳೂರು: ರೇಣುಕಾಸ್ವಾಮಿಯ ಕೊಲೆಯ ಬಳಿಕ ಮೃತದೇಹವನ್ನು ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೀಜ್ ಮಾಡಿರುವ ಘಟನೆ ನಡೆದಿದೆ.

ಇದೀಗ ಶವ ಸಾಗಿಸಲು ನೆರವಾದ ಗ್ಯಾರೇಜ್ ಮಂಜನಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಕೆಎ 03 ಎಂಯು 8821 ನಂಬರ್ ನ ಕಾರು ಆರ್.ಆರ್.ನಗರ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನ ಮನೆ ಬಳಿ ನಿಂತಿತ್ತು. ಬುಧವಾರ ರಾತ್ರಿಯೇ ಕಾರು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ತಂದಿದ್ದಾರೆ. ಈ ಕಾರು ಪುನಿತ್ ಎಂ.ಆರ್.ಎಂಬವರ ಹೆಸರಿನಲ್ಲಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.