ರಾಯಚೂರು: ಕೌಟುಂಬಿಕ ಕಲಹ ಉಲ್ಬಣಿಸಿ ತನ್ನ ತಾಯಿ ಹಾಗೂ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ವ್ಯಕ್ತಿ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿ ದುರ್ಘಟನೆ ನಡೆದಿದೆ.

ದ್ಯಾಮಮ್ಮ (66) ಹಾಗೂ ಜ್ಯೋತಿ (23) ಕೊಲೆಯಾದ ದುರ್ದೈವಿಗಳು. ದುರಗಪ್ಪ ಇಬ್ಬರನ್ನೂ ಹತ್ಯೆಗೈದ ಆರೋಪಿ. ಮುದ್ಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರನಾದ ದುರಗಪ್ಪನ ಕುಟುಂಬ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು.

ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು. ದುರಗಪ್ಪ ಮದ್ಯ ಸೇವಿಸಿ ಬಂದು ತಾಯಿ ಹಾಗೂ ಹೆಂಡತಿಗೆ ಮನಸೋ ಇಚ್ಛೆ ಥಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಕೊಲೆ ಬಳಿಕ ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.