ಉತ್ತರ ಪ್ರದೇಶ: ರೈಲು ನಿಲ್ದಾಣದ ಬಳಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಬಾಲಕಿಯ ಪತ್ತೆಯಾಗಿರುವ ಘಟನೆ ಬರೇಲಿಯ ಪಿತಾಂಬರಪುರದಲ್ಲಿ ನಡೆದಿದೆ.
6 ವರ್ಷದ ಬಾಲಕಿ ಎಂದು ಅಂದಾಜಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಮನುಷ್ ಪರೀಖ್ ಇದು ಕೊಲೆಯಲ್ಲ ಯಾವುದೋ ಪ್ರಾಣಿ ದಾಳಿ ಮಾಡಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಬಾಲಕಿಗೆ ರೈಲು ಡಿಕ್ಕಿಯಾಗಿರಬಹುದು ಅಥವಾ ಯಾವುದಾದರೂ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ದೇಹವನ್ನು ಎಳೆದುಕೊಂಡು ಹೋಗಿರುವ ಕಾರಣ ಬಾಲಕಿಯ ತಲೆಯು ಆಕೆಯ ದೇಹದಿಂದ ಬೇರ್ಪಟ್ಟಿದೆ ಎಂದು ಅವರು ಹೇಳಿದರು.
ಮೃತದೇಹ ಏಳರಿಂದ ಎಂಟು ದಿನಗಳ ಹಳೆಯದಾಗಿದ್ದು, ಇನ್ನೂ ಗುರುತು ಪತ್ತೆಯಾಗಿಲ್ಲ ಎಂದು ಎಎಸ್ಪಿ ಪರೀಕ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣವನ್ನು ಕಂಡುಹಿಡಿಯಲಾಗುವುದು ಮತ್ತು ಏತನ್ಮಧ್ಯೆ, ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳಿಂದ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

