ಬೆಂಗಳೂರು : ಎಂಬಿಎ ವ್ಯಾಸಂಗ ಮಾಡ್ತಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಸುಬ್ರಹ್ಮಣ್ಯ ನಗರ ಮಿಲ್ಕ್ ಕಾಲೋ ನಿಯ ಮನೆಯಲ್ಲಿ ಘಟನೆ ನಡೆದಿದ್ದು, ಕೊಳೆತ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾಗಿದೆ. ಸಾವನ್ನಪ್ಪಿದ ಯುವತಿಯನ್ನು ದಾವಣಗೆರೆ ಮೂಲದ ಸುಪ್ರಿಯಾ (25) ಎಂದು ಗುರುತಿಸಲಾಗಿದೆ.
ಎಂಬಿಎ ವ್ಯಾಸಂಗ ಮಾಡಿದ್ದ ಸುಪ್ರಿಯಾ ಬೈಕ್ ರೈಡಿಂಗ್ ತರಬೇತಿ ಸಹ ನೀಡುತ್ತಿದ್ದಳು. ಎರಡು ದಿನಗಳಿಂದ ಆಕೆ ವಾಸವಾಗಿದ್ದ ರೂಂ ಲಾಕ್ ಆಗಿತ್ತು. ಅನುಮಾನಗೊಂಡು ಮನೆ ಮಾಲೀಕರು ಬಾಗಿಲು ಓಪನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸುಬ್ರಮಣ್ಯನಗರ ಪೊಲೀಸ್ರಿಂದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಯುಡಿಆರ್ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರೋ ಪೊಲೀಸರು ಆಕೆಯ ಕಾಲ್ ಲಿಸ್ಟ್, ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಸಾಕ್ಷ್ಯ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.
ಪ್ರೇಮಪಾಶದಲ್ಲಿ ಸುಪ್ರಿಯಾ ಸಿಲುಕಿದ್ದಾಳಾ ಎಂಬ ಅನುಮಾನ ಮೂಡಿದೆ. ಆಕೆಯ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ ಮಾಡಲು ಪೊಲೀಸರು ಕ್ರಮಕೈಗೊಂಡಿದ್ದಾರೆ.

