ಉತ್ತರ ಪ್ರದೇಶ: ವಿದ್ಯಾರ್ಥಿಯೊಬ್ಬನನ್ನು ಹಸು ಕಳ್ಳಸಾಗಣೆದಾರನೆಂದು ತಿಳಿದು 30 ಕಿ.ಮೀ ಬೆನ್ನಟ್ಟಿ ಹತ್ಯೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ಗೋರಕ್ಷಕರು ಆತನನ್ನು ತಪ್ಪಾಗಿ ತಿಳಿದು ಹಿಂಬಾಲಿಸಿ ಗುಂಡಿಕ್ಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಆತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಎಂದು ಬಳಿಕ ತಿಳಿದುಬಂದಿದೆ. ಆಗಸ್ಟ್ 23ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.

ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಜಾನುವಾರು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಆರೋಪಿಗಳು ಸುಮಾರು 30ಕಿ. ಮೀ ವರೆಗೂ ಇವರ ಕಾರನ್ನು ಹಿಂಬಾಲಿಸಿದ್ದು , ನಂತರ ಕಾರು ನಿಲ್ಲಿಸುವಂತೆ ಹೇಳಿದರು ನಿಲ್ಲಿಸಿದ ಕಾರಣ ಅವರು ಕಾರಿಗೆ ಗುಂಡು ಹಾರಿಸಿದ್ದಾರೆ ಪರಿಣಾಮ ಆರ್ಯನ್‌ ಕುತ್ತಿಗೆಗೆ ತಗುಲಿದೆ.ಅಂತಿಮವಾಗಿ ಕಾರು ನಿಲ್ಲಿಸಿದಾಗ ಮತ್ತೆ ಗುಂಡು ಹಾರಿಸಲಾಯಿತು. ಆರೋಪಿಗಳು ಕಾರಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ನೋಡಿದಾಗ, ಅವರು ತಪ್ಪಾದ ವ್ಯಕ್ತಿಗೆ ಗುಂಡು ಹಾರಿಸಿರುವುದು ಗೊತ್ತಾಗಿದೆ ಬಳಿಕ ಓಡಿ ಹೋಗಿದ್ದಾರೆ.

ಆರ್ಯನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಒಂದು ದಿನದ ನಂತರ ಸಾವನ್ನಪ್ಪಿದ್ದಾರೆ.‘ಘಟನೆಯಲ್ಲಿ ಬಳಸಲಾದ ಆಯುಧವೂ ಅಕ್ರಮವಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.