ಮೈಸೂರು: ಹೆಚ್.ಡಿ ಕೋಟೆ ತಾಲ್ಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನಿಂದ ಲೈಂಗಿಕ ಕಿರುಕುಳ ಪ್ರಕರಣ ನಡೆದಿದ್ದು, ಕಾಮುಕ ಶಿಕ್ಷಕನನ್ನು ಬಂಧಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಸೆರೆಯಾದ ಕಾಮುಕ ಶಿಕ್ಷಕ ಗಿರೀಶ್ ಎಂದು ಗುರುತಿಸಲಾಗಿದೆ. ಪೊಲೀಸರಿಂದ ತಲೆ ಮರೆಸಿಕೊಂಡು ಹುಬ್ಬಳ್ಳಿಯಲ್ಲಿ ಕಾಮಿ ಗಿರೀಶ್ ಅಡಗಿದ್ದನು. ಕೊನೆಗೂ ಪ್ರಕರಣವನ್ನು ಹೆಚ್‌ಡಿ ಕೋಟೆ ಪೊಲೀಸರ ತಂಡ ಭೇದಿಸಿದೆ.
ಕಾಲಲ್ಲಿ ಚಪ್ಪಲಿ ಇಲ್ಲದೆ, ದಾಡಿ ಬಿಟ್ಕೊಂಡು ಆರೋಪಿ ಅವಿತಿದ್ದರು. ಗುರುತು ಮರೆಮಾಚಲು ಆರೋಪಿ ಗಿರೀಶ್ ಪ್ಲಾನ್ ಮಾಡಿದ್ದರು. ಹೆಚ್ ಡಿ ಕೋಟೆ ಸರ್ಕಲ್ ಇನ್ಸ್‌ಪೆಕ್ಟರ್ ಶಬ್ಬಿರ್ ಅಹ್ಮದ್, ಕ್ರೈಂ ಬೀರಪ್ಪ, ಸೇರಿದಂತೆ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಹುಬ್ಬಳ್ಳಿಯಿಂದ ಹೆಚ್ ಡಿ ಕೋಟೆಗೆ ಆರೋಪಿಯನ್ನು ಪೊಲೀಸರು ಕರೆತಂದಿದ್ದಾರೆ.

