ಉಡುಪಿ: ರೌಡಿಶೀಟರ್ ಸೈಫ್ ಹತ್ಯೆ ಪ್ರಕರಣದಲ್ಲಿ ಕೊಲೆ ಆರೋಪಿ ಫೈಸಲ್ ಪತ್ನಿಯೂ ಅರೆಸ್ಟ್ ಮಾಡಲಾಗಿದೆ. ಆರೋಪಿ ಮಹಮ್ಮದ್ ಪೈಝಲ್ ಪತ್ನಿ ರಿದಾ ಶಬಾನ ಬಂಧಿಸಲಾಗಿದ್ದು, ಸೆಪ್ಟೆಂಬರ್ 28ರಂದು ನಡೆದಿದ್ದ ಸೈಫುದ್ದೀನ್ ಕೊಲೆ ಆರೋಪದಲ್ಲಿ ಈಗಾಗಲೇ ಮೂವರ ಬಂಧನವಾಗಿತ್ತು.
ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ ರಿಧಾ ಬಂಧಿಸಲಾಗಿದೆ. ತನ್ನ ಪತ್ನಿಯ ಮೇಲೆ ಕೆಟ್ಟದೃಷ್ಟಿ ಹಾಕಿದ್ದಕ್ಕೆ ಕೊಲೆ ನಡೆಸಿದ್ದಾಗಿ ಫೈಜಲ್ ಹೇಳಿದ್ದನು. ಇದೇ ಕಾರಣಕ್ಕೆ ಸೈಫ್ ಕೊಲೆಯಲ್ಲಿ ತಾನು ಭಾಗಿಯಾಗಿದ್ದಾಗಿ ಪೈಜಲ್ ಹೇಳಿದ್ದರು.
ಸೈಫುದ್ದಿನ್ ಜೊತೆ ಒಂದು ವರ್ಷದಿಂದ ಸಲುಗೆಯಿಂದಿದ್ದು, ಸೈಫ್ ಜೊತೆ ಚಾಟಿಂಗ್, ಫೋನ್ ಕಾಲ್, ಫೋಟೋ ಶೇರ್ ಶಬಾನ ಮಾಡುತ್ತಿದ್ದ. ಪತ್ನಿ ಸೈಫುದ್ದೀನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಫೈಜಲ್ ಗೂ ತಿಳಿದಿತ್ತು.
ರಿಧಾಳನ್ನು ಬಳಸಿಕೊಂಡು ಫೈಝಲ್ ಕೊಲೆ ಸಂಚುರೂಪಿಸಿದ್ದನು. ರಿಧಾ ನಿನಗೆ ಕಾಯುತ್ತಿದ್ದಾಳೆ ಎಂದು ಫೈಸಲ್ ಜೊತೆಗೆ ಕರೆದೊಯ್ದ, ಮಣಿಪಾಲದಿಂದ ಕೊಡವೂರಿನ ಮನೆಗೆ ರಿಧಾ ಶಭಾನಾ ಕರೆಸಿಕೊಂಡನು. ಪತ್ನಿಯ ಹೆಸರಲ್ಲಿ ಸುಳ್ಳು ಹೇಳಿ ಫೈಜಲ್ ಕರೆಸಿಕೊಂಡಿದ್ದನು.
ತಾನು ಕೊಡವೂರಿನ ಮನೆಯಲ್ಲಿ ಕಾಯುತ್ತಿರುವುದಾಗಿ ರಿಧಾ ಹೇಳಿದ್ದ. ತನಿಖೆ ವೇಳೆ ರಿಧಾ ಸಂಚಿನಲ್ಲಿ ಭಾಗಿಯಾಗಿದ್ದು ಬಯಲಾಗಿದೆ. ಮಲ್ಪೆ ಪೊಲೀಸರಿಂದ ಫೈಸಲ್ ಪತ್ನಿ ಬಂಧಿಸಲಾಗಿದೆ.

