ಯಾದಗಿರಿ: ಎರಡು ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ ಹಾಗೂ ಆತನ ಸಹಚರನ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಶಹಾಪುರ (Shahapur) ತಾಲೂಕಿನ ಸಾದ್ಯಾಪುರ ಗ್ರಾಮದ ಬಳಿ ನಡೆದಿದೆ.

ಮದ್ದರಕಿ ಗ್ರಾಮದ ಮಾಪಣ್ಣ ಹಾಗೂ ಅಲಿಸಾಬ್ ಹತ್ಯೆಯಾದವರು (kill) . ಬೈಕ್​ನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದವರ ಮಾಹಿತಿ ಮತ್ತು ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್​ನಲ್ಲಿ ಅಲಿಸಾಬ್ ಜೊತೆಗೆ ತೆರಳುತ್ತಿದ್ದ ಮಾಪಣ್ಣನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರಿಂದ ಭಯಭೀತಗೊಂಡು ಅಲಿಸಾಬ್ ಓಡಿಹೋಗಿ‌ ಮನೆ ಸೇರಿದ್ದ. ತಮ್ಮ ತಂದೆಯ ಮಾಹಿತಿ ಅಲಿಸಾಬ್ ನೀಡಿದ್ದಾನೆಂದು ಮಾಪಣ್ಣನ ಮಕ್ಕಳಿಂದ ಅಲಿಸಾಬ್​​ ನನ್ನು ಬರ್ಬರ ಕೊಲೆ ಮಾಡಲಾಗಿದೆ.

ಪ್ರಕರಣ ಬಗ್ಗೆ ಶಹಾಪುರದಲ್ಲಿ ಯಾದಗಿರಿ ಎಸ್​​ಪಿ ಪೃಥ್ವಿಕ್ ಶಂಕರ್​ ಮಾತನಾಡಿದ್ದು, ಸಾದ್ಯಾಪುರ ಕ್ರಾಸ್ ಬಳಿ ಬೆಳಗ್ಗೆ 9.30ರ ಸುಮಾರಿಗೆ ಕೊಲೆ ನಡೆದಿದೆ. ಬೈಕ್​ನಲ್ಲಿ ಅಲಿಸಾಬ್ ಜೊತೆಗೆ ತೆರಳುತ್ತಿದ್ದ ಮಾಪಣ್ಣನ ಹತ್ಯೆಯಾಗಿದೆ. ಇದರಿಂದ ಭಯಭೀತಗೊಂಡು ಅಲಿಸಾಬ್ ಓಡಿಹೋಗಿ‌ ಮನೆ ಸೇರಿದ್ದ. ಊರು ಸೇರಿಕೊಂಡಿದ್ದ ಅಲಿಸಾಬ್​ನನ್ನು ಹತ್ಯೆ ಮಾಡಿದ್ದಾರೆ. ಮಾಪಣ್ಣನನ್ನು ರೌಡಿಶೀಟರ್ ಹುಸೇನಿ‌ ಕೊಂದಿದ್ದಾನೆ ಎಂದು ಮಾಹಿತಿ ಇದೆ. ಅದೇ ರೀತಿಯಾಗಿ ಅಲಿಸಾಬ್​ನನ್ನು ಮಾಪಣ್ಣನ ಮಕ್ಕಳು ಕೊಂದಿದ್ದಾರೆ ಎನ್ನಲಾಗುತ್ತಿದೆ ಎಂದು ಹೇಳಿದ್ದಾರೆ.

ಶೀಘ್ರವೇ ಎರಡು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ. 2014ರಲ್ಲಿ ಮಾಪಣ್ಣನ ಮೇಲೆ ರೌಡಿಶೀಟರ್ ಹುಸೇನಿ ದಾಳಿ ಮಾಡಿದ್ದ. ಭೀಮರಾಯನಗುಡಿ ಠಾಣೆಯಲ್ಲಿ ಮಾಪ್ಪಣ್ಣ ವಿರುದ್ಧ 9 ಕೇಸ್ ದಾಖಲಾಗಿದ್ದವು ಎಂದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಎರಡು ಶವ ಇಡಲಾಗಿದೆ. ನೂರಾರು ಜನರು ಸೇರಿದ್ದಾರೆ. ಭೀಮರಾಯಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ-ಸುಧೀರ್ ಕೋಟೆ ಯಾದಗಿರಿ