ಮೈಸೂರು: ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಾರ್ತಿಕ್ ಕೊಲೆ ಆಗಿದೆ. ಕಾರ್ತಿಕ್ ಮೂಲತಃ ಮೈಸೂರು ಮೂಲದ ವ್ಯಕ್ತಿ. ಈತನ ವಿರುದ್ಧ ರೌಡಿ ಶೀಟರ್ ಕೂಡ ಇದೆ. ಕೊಲೆಯಾದ ಬಳಿಕ 3 ತಂಡ ರಚನೆ ಮಾಡಿ ಆರೋಪಿಗಳ ವಶಕ್ಕೆ ಬಲೆ ಬೀಸಿದ್ದೆವು.
ಮಹಿಳೆ ಸೇರಿ 7 ಆರೋಪಿಗಳು ಸಿಕ್ಕಿಬಿದ್ದು ಅಪರಾಧ ಕೃತ್ಯ ಒಪ್ಪಿಕೊಂಡಿದ್ದಾರೆ. ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು. ಆರಂಭದಲ್ಲಿ ಹಣದ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ಮಾಡಿದೆವು. ನಂತರ ಒಂದು ಹುಡುಗಿ ವಿಚಾರಕ್ಕೆ ಕೊಲೆ ಆಗಿದೆ ಅಂತ ಗೊತ್ತಾಯ್ತು. ಕಾರ್ತಿಕ್ ಈ ಹಿಂದೆ ಪ್ರವೀಣ್ ಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನಲೆ ಪ್ರವೀಣ್ ಗುಂಪು ಕಟ್ಟಿಕೊಂಡು ಕಾರ್ತಿಕ್ ಹತ್ಯೆ ಮಾಡಿದ್ದಾನೆ.

ಪ್ರವೀಣ್ ಈ ಹಿಂದೆ ಕಾರ್ತಿಕ್ ಕಾರ್ ಡ್ರೈವರ್ ಆಗಿರುತ್ತಾನೆ. ಕೊಲೆಯಲ್ಲಿ ಮಹಿಳೆಯ ಕೈವಾಡವೂ ಇದೆ. ಕಾರ್ತಿಕ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿದ್ದ.ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕಾರ್ತಿಕ್ ಗೆ ಪರಿಚಯ ಇತ್ತು. ಹೇಗೆ ಆತನನ್ನು ಟ್ರ್ಯಾಪ್ ಮಾಡಿದ್ರು ಪ್ಲಾನ್ ಹೇಗೆ ಮಾಡಿದ್ರು ಅಂತ ಸಂಪೂರ್ಣ ಮಾಹಿತಿ ತನಿಖೆ ಬಳಿಕ ತಿಳಿಸುತ್ತೇವೆ.
ಕಾರ್ತಿಕ್ ಜೊತೆ ಇವರೆಲ್ಲರಿಗೂ ಪರ್ಸನಲ್ ಎನಿಮಿಟಿ ಇತ್ತು.ಪ್ರವೀಣ್ ಗೆ ಕಾರ್ತಿಕ್ ನಿಂದ ಜೀವ ಭಯ ಇತ್ತು. ಹೀಗಾಗಿ ಇವನನ್ನು ಬಿಟ್ರೆ ನನ್ನ ಮುಗಿಸುತ್ತಾನೆ ಅಂತ ಪ್ಲಾನ್ ಮಾಡಿ ಪ್ರವೀಣ್ ಗ್ಯಾಂಗ್ ಆತನನ್ನು ಮುಗಿಸಿದೆ ಎಂದು ಎಸ್ಪಿ ವಿಷ್ಣುವರ್ಧನ್ ಹೇಳಿಕೆ ನೀಡಿದರು.

