ಮಂಡ್ಯ: ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ತಡರಾತ್ರಿ ರೌಡಿಶೀಟರ್ ಬರ್ಬರ ಹತ್ಯೆಯಾಗಿದೆ.
ಲಕ್ಷ್ಮೀ ಸಾಗರ ಗ್ರಾಮದ ಮಹೇಶ್(26) ಕೊಲೆಯಾದ ರೌಡಿ ಶೀಟರ್. ತಡರಾತ್ರಿ ಬಾರ್ ಒಂದರಲ್ಲಿ ಯುವಕರ ನಡುವೆ ಘರ್ಷಣೆಯಾಗಿತ್ತು. ಆ ಬಳಿಕ ಅಮೃತಿ ಗ್ರಾಮದ ಹೆದ್ದಾರಿ ಬಳಿ ಮಹೇಶ್ ಮರ್ಡರ್ ಆಗಿದೆ. ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈಯಲಾಗಿದೆ.
ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ, ಮೇಲುಕೋಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ಮೃತ ವ್ಯಕ್ತಿ ಶವ ರವಾನೆಯಾಗಿದೆ. ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

