ಮುಂಬೈ: ಇತ್ತೀಚೆಗೆ ದರೋಡೆಕೋರರ ಹಾವಳಿ ಹೆಚ್ಚುತ್ತಲೇ ಇದೆ, ಮಾಲೀಕರನ್ನು ಹೆದರಿಸಿ, ಬೆದರಿಸಿ ದರೋಡೆ ಮಾಡುತ್ತಾರೆ ಇನ್ನೂ ಕೆಲವರು ಮಾಲೀಕರನ್ನು ಕೊಲ್ಲಲು ಮುಂದಾಗುತ್ತಾರೆ. ಇದೀಗ ಇಂತಹದ್ದೆ ಘಟನೆಯೊಂದು ನಡೆದಿದ್ದು ಹೆಲ್ಮೆಟ್ ಧರಿಸಿದ ಮೂವರ ದುಷ್ಕರ್ಮಿಗಳ ಗುಂಪೊಂದು ಆಭರಣ ಅಂಗಡಿಗೆ ನುಗ್ಗಿ ಚಿನ್ನದ ಆಭರಣಗಳನ್ನು ದರೋಡೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಖಾರ್ಘರ್ ಸೆಕ್ಟರ್ 35 ರಲ್ಲಿರುವ ಆಭರಣ ಅಂಗಡಿಯಲ್ಲಿ ನಡೆದಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂಗಡಿಯಲ್ಲಿದ್ದ ಸಿಬ್ಬಂಧಿಗಳನ್ನು ಗನ್ ಹಿಡಿದು ಶೂಟ್ ಮಾಡುವುದಾಗಿ ಬೆದರಿಸಿ 11 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಕದ್ದ ನಂತರ, ಅವರು ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಸ್ಕೂಟರ್ ಹತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಈ ಬಗ್ಗೆ ಖಾರ್ಘರ್ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯ ಮೂಲಕ ಮೂವರು ದುಷ್ಕರ್ಮಿಗಳ ಬಂಧನಕ್ಕೆ ತನಿಖೆ ನಡೆಸುತ್ತಿದ್ದಾರೆ.

