ಮಂಡ್ಯ: ಮಗಳ ಮರ್ಡರ್ ಗೆ ತಂದೆ ಯುವಕನ ತಂದೆಯನ್ನ ಹಾಡುಹಗಲೇ ಹತ್ಯೆಗೈದು ಪ್ರತಿಕಾರ ತೀರಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.
ಕಳೆದ ವರ್ಷ ಟೀಚರ್ ನ ಕೊಲೆ ಮಾಡಿದ್ದ ಯುವಕ ನಿತೀಶ್. ಒಂದು ವರ್ಷದ ಹಿಂದೆ ಶಿಕ್ಷಕಿ ದೀಪಿಕಾಳನ್ನ ಯುವಕ ನಿತೀಶ್ ಕೊಲೆ ಮಾಡಿದ್ದ. ಘಟನೆ ಬಳಿಕ ಜೈಲು ಸೇರಿದ್ದ. ಕೆಲವು ದಿನಗಳ ನಂತರ ಜೈಲಿನಿಂದ ಹೊರ ಬಂದಿದ್ದ. ಮಗಳ ಕೊಲೆಯ ಪ್ರತೀಕಾರಕ್ಕೆ ದೀಪಿಕಾ ತಂದೆ ವೆಂಕಟೇಶ್ ಹೊಂಚುಹಾಕುತ್ತಿದ್ದರು.
ಇಂದು ದೀಪಿಕಾ ತಂದೆಗೆ ನಿತೀಶ್ ತಂದೆ ನರಸಿಂಹೇಗೌಡ ಸಿಕ್ಕಿಬಿದ್ದಿದ್ದಾರೆ. ನರಸಿಂಹೇಗೌಡ ಹೊಟ್ಟೆ ಭಾಗಕ್ಕೆ ದೀಪಿಕಾ ತಂದೆ ಚಾಕು ಇರಿದಿದ್ದಾರೆ. ಬೆಳಿಗ್ಗೆ 8.30ರ ವೇಳೆ ಘಟನೆ ನಡೆದಿದೆ. ಚಾಕು ಇರಿತದಿಂದ ಸ್ಥಳದಲ್ಲಿಯೇ ನರಸಿಂಹೇಗೌಡ ಮೃತಪಟ್ಟಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿರುವ ದೀಪಿಕಾ ತಂದೆ ವೆಂಕಟೇಶ್. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

