ನಂಜನಗೂಡು: ಆಸ್ತಿ ವಿಚಾರದಲ್ಲಿ ಮನೆಗೆ ನುಗ್ಗಿದ ಮೂವರು ಸಂಬಂಧಿಕರು ವೃದ್ದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಕಡಬೂರು ಗ್ರಾಮದಲ್ಲಿ ನಡೆದಿದೆ. ಶಿವರಾಜು(62) ಹಾಗೂ ಶಿವಮ್ಮ(52) ಹಲ್ಲೆಗೊಳಗಾದ ವೃದ್ದ ದಂಪತಿ.
ಸೋಮಶೇಖರ್, ರಾಜು, ಸುರೇಶ್ಚಹಾಗೂ ಇತರರು ಸೇರಿ ಮನೆಗೆ ನುಗ್ಗಿ ವೃದ್ದ ದಂಪತಿಯನ್ನ ಹೊರಕ್ಕೆ ಎಳೆದು ಕಬ್ಬಿಣದ ಸಲಾಕೆಗಳಿಂದ ಹಲ್ಲೆ ನಡೆಸಿದ್ದಾರೆ. ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಇತ್ತು.ಈ ಬಗ್ಗೆ ಆಗಾಗ ಗಲಾಟೆಗಳೂ ನಡೆಯುತ್ತಿತ್ತು.
ಕಡಬೂರು ಗ್ರಾಮದಲ್ಲಿ ಪಕ್ಷದ ಬಾಡೂಟದಲ್ಲಿ ಭಾಗವಹಿಸಿ ಕುಡಿದ ಅಮಲಿನಲ್ಲಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಹಲ್ಲೆಗೊಳಗಾದ ಶಿವರಾಜು ಮತ್ತು ಶಿವಮ್ಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

