ಅಮೆರಿಕದ ಕೇಂಬ್ರಿಡ್ಜ್ ನ ಹಂಟಿಂಗ್ಡನ್ ಗೆ ತೆರಳುತ್ತಿದ್ದ ರೈಲುವೊಂದರಲ್ಲಿ ಅನಾಮಿಕ ವ್ಯಕ್ತಿಗಳು ಸಿಕ್ಕ ಸಿಕ್ಕ ಜನರ ಮೇಲೆ ಚಾಕುವಿನಿಂದಹಲ್ಲೆ ನಡೆಸಿದ ಘಟನೆ ನಡೆದಿದೆ.

ಕೇಂಬ್ರಿಡ್ಜ್ ನ ಹಂಟಿಂಗ್ಡನ್ ಗೆ ರೈಲು ತೆರಳುತ್ತಿದ್ದಾಗ ರೈಲಿಗೆ ಹತ್ತಿದ್ದ ಇಬ್ಬರು ಹತ್ತಿದ್ದಾರೆ. ಬಳಿಕ ಕೆಲ ಸಮಯದ ಬಳಿಕ ತಮ್ಮ ಬಳಿಯಿದ್ದ ಚಾಕುವಿನಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ,

ಕೂಡಲೇ ಎಚ್ಚೆತ್ತ ಪ್ರಯಾಣಿಕರು ಈ ಬಗ್ಗೆ ಕೇಂಬ್ರಿಡ್ಜ್ ಶೈರ್ ಪೊಲೀಸ್ ಠಾಣೆ ವಿಷಯ ತಿಳಿಸಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈಲನ್ನು ನಿಲ್ಲಿಸುವಂತೆ ಸೂಚಿಸಿದರು ಹಾಗೆ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.