ಅಮೃತಸರ: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದೂಕು ಹಿಡಿದು ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೇ ಪತ್ನಿ ಮತ್ತು ಮಗುವನ್ನು ಬೆದರಿಸಿದ್ದಾರೆ. ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಭಯಾನಕ ಘಟನೆ ಪಂಜಾಬ್‌ನ ಅಮೃತಸರದ ದಬುರ್ಜಿ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಶನಿವಾರ (ಆಗಸ್ಟ್ 24) ಬೆಳಿಗ್ಗೆ ಸುಮಾರು ಏಳು ಗಂಟೆಯ ವೇಳೆಗೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯಲ್ಲಿ ಬಂಧೂಕು ಹಿಡಿದುಕೊಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಈ ವೇಳೆ ಮನೆಮಂದಿಯನ್ನು ಬೆದರಿಸಿ ಬಳಿಕ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಈ ವೇಳೆ ವ್ಯಕ್ತಿಯ ಪತ್ನಿ ಹಾಗೂ ಮಗ ಕೈಮುಗಿದು ಗುಂಡು ಹಾರಿಸದಂತೆ ಬೇಡಿಕೊಂಡಿದ್ದಾರೆ ಆದರೂ ಕೇಳದ ದುಷ್ಕರ್ಮಿಗಳು ಮತ್ತೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ ಆದರೆ ಅದೃಷ್ಟವಶಾತ್ ಬಂದೂಕಿನಿಂದ ಗುಂಡು ಹಾರಲಿಲ್ಲ ಎನ್ನಲಾಗಿದೆ.

ಬಳಿಕ ಅಲ್ಲಿಂದ ಕಾಲ್ಕಿತ್ತ ದುಷ್ಕರ್ಮಿಗಳ ತಂಡ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಗುಂಡಿನ ದಾಳಿಗೆ ಸುಖಚೈನ್ ಸಿಂಗ್ ಗಂಭೀರ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.