ಬೆಂಗಳೂರು: ನರ್ಸ್ ಸೋಮಿನಿ ಸತ್ಯಭಾಮ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಐಟಿಸಿ ವಿಂಡ್ಸರ್ ಮ್ಯಾನರ್ ಹೊಟೇಲ್‌ನಲ್ಲಿ ಸ್ಟಾಪ್ ನರ್ಸ್ ಆಗಿದ್ದ ಸೋಮಿನಿ ಸತ್ಯಭಾಮ ಅವರನ್ನು ಆಸ್ತಿ ವಿಚಾರಕ್ಕೆ ಜೂನ್ 11 ರ ರಾತ್ರಿ ಮಚ್ಚು, ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು.
ಎ1 ಸಾಗರ್ (20) , ಎ2 ಆಕಾಶ್(19) , ಎ3 ಓಂ ಶಿವಶಂಕರ್(50), ಎ4 ಪ್ರವೀಣ್(24), ಎ5 ಪೂಜಾ (22) ಹಾಗೂ ಎ6 ಗಾಯಿತ್ರಿ ದೇವಿ ಬಂಧಿತ ಅರೋಪಿಗಳು.
ಸೋಮಿನಿ ಸತ್ಯಭಾಮ ಹೆಲ್ಮೆಟ್ ಹಾಕಿಕೊಂಡು ಸ್ಕೂಟರ್ ಹತ್ತುತ್ತಿದ್ದ ವೇಳೆ ಮಚ್ಚಿನಿಂದ ಸಾಗರ್ ಅಟ್ಯಾಕ್ ಮಾಡಿದ್ದನು. ಬಳಿಕ ಇತರೆ ಆರೋಪಿಗಳು ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದರು. ಆಸ್ತಿ ವಿಚಾರಕ್ಕೆ ಸೋದರ ಅತ್ತೆಯನ್ನು ಕೊಲೆ ಮಾಡಲು ಎ1 ಸಾಗರ್ ಪ್ಲ್ಯಾನ್ ಮಾಡಿದ್ದನು. ಮೂರನೇ ಆರೋಪಿ ಓಂ ಶಿವಶಂಕರ್ ಸಾಗರ್ ತಂದೆಯಾಗಿದ್ದಾನೆ.
ತನ್ನ ತಂದೆಗೆ ಆಸ್ತಿಯಲ್ಲಿ ಭಾಗ ನೀಡಿಲ್ಲ ಅನ್ನೋ ಕಾರಣಕ್ಕೆ ಸೋದರ ಅತ್ತೆಯನ್ನೇ ಸಾಗರ್ ಕೊಲೆ ಮಾಡಿದ್ದಾನೆ. ಕೊಲೆ ಪ್ರಕರಣದಲ್ಲಿ ಇಡೀ ಕುಟುಂಬವನ್ನೇ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

