ಮಂಗಳೂರು: ನಟೋರಿಯಸ್ ರೌಡಿ ಶೀಟರ್ ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದಿದೆ.

ಉಳ್ಳಾಲದ ಕಡಪ್ಪಾರ‌ ಸಮೀರ್ ಕೊಲೆಯಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಸಮೀರ್ ಹತ್ಯೆ ಪ್ರಕರಣದ ಆರೋಪಿ ನಟೋರಿಯಸ್ ಟಾರ್ಗೆಟ್ ಇಲಿಯಾಸ್ ಎಂಬ ಮಾಹಿತಿ ತಿಳಿದು ಬಂದಿದೆ.

ಸಮೀರ್ ತಾಯಿಯೊಂದಿಗೆ ಹೋಟೆಲ್‌ ಗೆ ಊಟಕ್ಕೆ ಬಂದಿದ್ದನು. ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಬೆನ್ನಟ್ಟಿದೆ. ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದೆ.

ಇತ್ತೀಚೆಗೆ ಮಂಗಳೂರು ಕಾರಾಗೃಹ ದಲ್ಲಿ ಸಮೀರ್ ಮೇಲೆ ಸಹ ಕೈದಿ ಗಳಿಂದ ದಾಳಿ‌ ನಡೆದಿತ್ತು. ಸಮೀರ್ ವಾರದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದನು. ಪೂರ್ವ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.