ಹಾಸನ: ನಗರದಲ್ಲಿ ಬೆಳ್ಳಂ ಬೆಳಿಗ್ಗೆ ನಟೋರಿಯಸ್ ರೌಡಿಯ ಬರ್ಬರ ಹತ್ಯೆಯಾಗಿ ನೆತ್ತರು ಹರಿದಿದೆ. ರವಿ ಅಲಿಯಾಸ್ ಚೈಲ್ಡ್ ರವಿ (45) ಕೊಲೆಯಾದ ಕುಖ್ಯಾತ ರೌಡಿ ಶೀಟರ್.
ಹಾಸನದ ಹೇಮಾವತಿನಗರದಲ್ಲಿ ಈ ಘಟನೆ ನಡೆದಿದೆ. ರವಿ ಅಲಿಯಾಸ್ ಚೈಲ್ಡ್ ರವಿ ಕುಡಿಯುವ ನೀರು ತೆಗೆದುಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ರಸ್ತೆಯಲ್ಲಿ ಕೊಚ್ಚಿ ಅಟ್ಯಾಕ್ ಮಾಡಿರುವ ಹಂತಕರು ಬಳಿಕ ಎಸ್ಕೇಪ್ ಆಗಿದ್ದಾರೆ.
ಇನ್ನು ಚೈಲ್ಡ್ ರವಿ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದ. ಘಟನಾ ಸ್ಥಳಕ್ಕೆ ಪೆನ್‌ಷನ್ ಮೊಹಲ್ಲಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

