ಬೆಂಗಳೂರು: ದರ್ಶನ್ ಬಳ್ಳಾರಿ ಜೈಲಿಗೆ ಸೇರಿ ಇಂದಿಗೆ ಮೂರು ದಿನ. ಅನೇಕರು ಅವರ ಭೇಟಿಗೆ ಕಾಯುತ್ತಿದ್ದಾರೆ. ಆದರೆ 511 ನಂಬರ್ನ ಕೈದಿ ಭೇಟಿಗೆ ಯಾರಿಗೂ ಅವಕಾಶವಿಲ್ಲ ಎಂದು ಡಿಐಜಿ ಟಿಪಿ ಶೇಷಾರವರು ಖಡಕ್ ಆಗಿ ಹೇಳಿದ್ದಾರೆ.
ದರ್ಶನ್ ಅವರ ಮೊದಲ ರಕ್ತ ಸಂಬಂಧಿಗಳಿಗೆ ಮಾತ್ರ ಭೇಟಿಗೆ ಅವಕಾಶವಿದೆ. ಅದನ್ನು ಬಿಟ್ಟರೆ ವಕೀಲರಿಗೆ ಅವಕಾಶವಿದೆ. ಸ್ನೇಹಿತರು, ಸೆಲೆಬ್ರಿಟಿಗಳು ಬಂದ್ರೆ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ದರ್ಶನ್ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇದ್ದಾರೆ. 15 ಸೆಲ್‌ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಖೈದಿಗಳಿದ್ದಾರೆ. ದರ್ಶನ ಅಕ್ಕಪಕ್ಕ ಯಾರು ಇಲ್ಲ. ದರ್ಶನ ಸೆಲ್ ಮುಂದೆ ಮೂರು ಸಿಸಿ ಕ್ಯಾಮರಾ ಇದೆ. ಬಾಡಿವೂರ್ನ್ ಕ್ಯಾಮೆರಾ ಮೂಲಕ ನಿಗಾವಹಿಸಲಾಗಿದೆ. ದರ್ಶನ ಮೇಲೆ ನಿಗಾ ಜಾಸ್ತಿದೆ ಎಂದು ಹೇಳಿದ್ದಾರೆ.
ದರ್ಶನ್ಗೆ ಬೆನ್ನು ನೋವು ಇರುವ ಕಾರಣ, ಮೋಷನ್ ಸಮಸ್ಯೆಯಿಂದ ದರ್ಶನ ಊಟ ಬೇಡ ಅಂತಿದ್ದಾರೆ. ಜೈಲು ಊಟ ಸರಿಯಾಗಿ ನೀಡಲಾಗುತ್ತಿದೆ. ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್‌ಗೆ ದರ್ಶನ್ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡುತ್ತೇವೆ. ಅದರ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಡಿಐಜಿ ಟಿಪಿ ಶೇಷಾ ಹೇಳಿದ್ದಾರೆ.

