ಮುಂಬೈ:  ಎರಡು ದಿನಗಳಿಂದ ಅನುಮಾಸ್ಪದವಾಗಿ ಕಾಣೆಯಾಗಿದ್ದ 22 ವರ್ಷದ ಯಶಶ್ರೀಯ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಅದನ್ನು ಬೀದಿನಾಯಿಗಳು ತಿಂದಿರುವ ಘಟನೆ ನವೀ ಮುಂಬೈನಲ್ಲಿ ನಡೆದಿದೆ., ಆಕೆಯ ಜನನಾಂಗ ಮತ್ತು ಎದೆಯ ಭಾಗ ಸೇರಿದಂತೆ ಖಾಸಗಿ ಭಾಗಗಳನ್ನು ಬರ್ಬರವಾಗಿ ಇರಿಯಲಾಗಿದೆ.

ಶುಕ್ರವಾರ (ಜುಲೈ 26) ರಾತ್ರಿ ಮಹಿಳೆಯ ಮೃತದೇಹ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ಅದನ್ನು ತಿನ್ನುತ್ತಿವೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ದೇಹವು ಆಕೆಯ ಎದೆ, ಸೊಂಟ, ಬೆನ್ನು ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಹಲವಾರು ಇರಿತದ ಗಾಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಆಕೆಯ ಮೂಳೆಗಳು ಮುರಿದಿವೆ ಎಂದು ಪೊಲೀಸರು ಹೇಳಿದ್ದಾರೆ.

ದಾವೂದ್ ಶೇಖ್ ಎಂಬಾತ ಆಕೆಯನ್ನು ಕೊಂದಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.