ಮಂಡ್ಯ: ಮೇಲುಕೋಟೆ ಟೀಚರ್ ಕೊಲೆಗೆ ಅಪ್ಪ ಸೇಡು ತೀರಿಸಿಕೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಕುವಿನಿಂದ ಚುಚ್ಚಿ ಚುಚ್ಚಿ ಹತ್ಯೆಗೈದ ದೃಶ್ಯ ಸೆರೆಯಾಗಿದೆ. ನನ್ನ ಮಗಳನ್ನ ಕೊಂದು ನಿನ್ನ ಮಗಳ ಮದುವೆಯನ್ನ ಹೆಂಗೆ ಖುಷಿಯಾಗಿ ಮಾಡ್ತೀಯಾ?. ನಿನ್ನನ್ನು ಬಿಡಲ್ಲ, ಮಗಳ ಕೊಂದ ನಿನ್ನ ಮಗನನ್ನೂ ಬಿಡಲ್ಲ ಎನ್ನುತ್ತಲೇ ಹತ್ಯೆ ಮಾಡಿದ್ದಾನೆ.

16 ತಿಂಗಳ ಕಾಲ ಕಾದು ಮಗಳ ಹತ್ಯೆಗೆ ಅಪ್ಪ ಸೇಡು ತೀರಿಸಿಕೊಂಡಿದ್ದಾರೆ. ಮೇ 6 ರಂದು ಮಾಣಿಕ್ಯನಹಳ್ಳಿ ಗೇಟ್ ಬಳಿ ನಡೆದಿದ್ದ ನರಸಿಂಹ ಎಂಬಾತನ ಕೊಲೆ ನಡೆದಿತ್ತು.ಟೀ ಕುಡಿಯಲು ಹೋಗಿದ್ದ ನರಸಿಂಹನನ್ನ ಬರ್ಬರವಾಗಿ ಹತ್ಯೆಗಯ್ಯಲಾಗಿತ್ತು. ಮೃತ ನರಸಿಂಹ ಮಗಳ ಮದುವೆ ಸಂಭ್ರಮದಲ್ಲಿದ್ದರು.

ಮನಸ್ಸೋ ಇಚ್ಛೆ ಚಾಕು ಇರಿದಿದ್ದರಿಂದ ನರಸಿಂಹ ಸ್ಥಳದಲ್ಲೇ ನರಳಿ ನರಳಿ ಮೃತ ಪಟ್ಟಿದ್ದಾರೆ. ಮಗಳ ಮದುವೆಗೆ ನಾಲ್ಕು ದಿನ ಇದ್ದಾಗ ನರಸಿಂಹ ಕೊಲೆಯಾಗಿದ್ದಾರೆ. ಅದೇ ಗ್ರಾಮದ ವೆಂಕಟೇಶ್, ಆತನ ಸ್ನೇಹಿತನಿಂದ ಕೃತ್ಯ ನಡೆದಿದೆ.ಕಳೆದ ವರ್ಷ ಜನವರಿಯಲ್ಲಿ ವೆಂಕಟೇಶ್ ಪುತ್ರಿ ಟೀಚರ್ ದೀಪಿಕಾ ಕೊ* ಆಗಿದ್ದರು. ದೀಪಿಕಾಳನ್ನ ಹತ್ಯೆ ಮಾಡಿ ಮೇಲುಕೋಟೆ ಬೆಟ್ಟದ ತಪ್ಪಲ್ಲಲ್ಲಿ ನರಸಿಂಹನ ಪುತ್ರ ನಿತೀಶ್ ಹೂತುಹಾಕಿದ್ದ.

ಬಳಿಕ ಜೈಲಿಗೆ ಹೋಗಿ ಸದ್ಯ ಬೇಲ್ ನಲ್ಲಿ ನಿತೀಶ್ ಹೊರಗೆ ಬಂದಿದ್ದ. ಪುತ್ರಿಯ ಕೊಲೆಗೆ ಸೇಡು ತೀರಿಸಿಕೊಳ್ಳಲು ವೆಂಕಟೇಶ್ ಕಾಯುತ್ತಿದ್ದರು. ಮದುವೆ ಸಮಯದಲ್ಲಿ ಹೊಂಚು ಹಾಕಿದ ವೆಂಕಟೇಶ್ ಕೃತ್ಯವೆಸಗಿದ್ದಾರೆ. ನಿತೀಶ್ ತಂದೆ ನರಸಿಂಹನನ್ನ ಕೊಲೆಗೈದು ಸೇಡು ತೀರಿಸಿಕೊಂಡಿದ್ದಾನೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.