ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ದ ವಿಚಾರ ಬಯಲಾದ ಬೆನ್ನಲ್ಲೇ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಕೋರ್ಟ್​ ಅನುಮತಿ ನೀಡಿತ್ತು.

ಆದರೆ, ರಾಜಾತಿಥ್ಯ ಸಂಬಂಧದ ಪ್ರಕರಣದಲ್ಲಿ ವಿಚಾರಣೆ ಬಾಕಿದ್ದ ಕಾರಣ ಶಿಫ್ಟ್​ ಮಾಡಲಿರಲಿಲ್ಲ. ಈಗ ಪ್ರಾಥಮಿಕ ತನಿಖೆ ಮುಕ್ತಾಯವಾಗಿದ್ದು, ನಟ ದರ್ಶನ್​ರನ್ನು ಭಯಾನಕ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಆದರೆ ಭದ್ರತಾ ದೃಷ್ಟಿಯಿಂದ ದರ್ಶನ್​ರನ್ನು ರಾತ್ರೋ ರಾತ್ರಿ ಬಳ್ಳಾರಿಗೆ ಜೈಲಿನತ್ತ ಕರೆದೊಯ್ಯಲಾಗ್ತಿದೆ. ಜೈಲು ಸಿಬ್ಬಂದಿ ಬಂದೋಬಸ್ತ್​ನಲ್ಲಿ ರಾತ್ರಿಯೇ ಕರೆದೊಯ್ದಿದ್ದಾರೆ.