ಪ್ರಿಯಕರನೊಂದಿಗೆ ಓಡಿ ಹೋಗಲು ಮಹಿಳೆಯೊಬ್ಬಳು ತನ್ನ 3 ವರ್ಷದ ಮುದ್ದು ಮಗುವನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಆರೋಪಿ ಕಾಜಲ್ ಳನ್ನು ಬಂಧಿಸಲಾಗಿದ್ದು, ತಾನು ವಿವಾಹೇತರ ಸಂಬಂಧ ಹೊಂದಿದ್ದು, ಪತಿಯನ್ನು ಬಿಡಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ, ಆದರೆ ಆಕೆಯ ಪ್ರಿಯಕರನಿಗೆ ತನ್ನ ಮಗಳು ನನ್ನ ಬರಲು ಇಷ್ಟವಿರಲಿಲ್ಲ. ಹೀಗಾಗಿ ಮಗುವಿನ ಕತ್ತು ಸೀಳಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಯೊಳಗೆ ಎಸೆದಿದ್ದಳು.

ಮಗುವಿನ ಮೃತದೇಹ ಪತ್ತೆಯಾಗಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು ಮತ್ತು ಹತ್ಯೆಯ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಫೊರೆನ್ಸಿಕ್ ತಂಡವು ಇಡೀ ಮನೆಯನ್ನು ಹುಡುಕಾಡಿದಾಗ ನೆಲ ಹಾಗೂ ಸಿಂಕ್ , ತಾರಸಿ ಬಳಿ ರಕ್ತದ ಕಲೆಗಳನ್ನು ಪತ್ತೆ ಮಾಡಿದ್ದಾರೆ.

ಘಟನೆ ದಿನ ಕಾಜಲ್ ಪತಿ ಮನೋಜ್​ಗೆ ಕರೆ ಮಾಡಿ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ತಿಳಿಸಿದ್ದಳು. ಸದ್ಯ ಅರೋಪಿ ಕಾಜಲ್‌ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಕಾಜಲ್ ಫೋನ್ ಲೊಕೇಶನ್ ಟ್ರ್ಯಾಕ್ ಮಾಡಿ ದಾಳಿ ನಡೆಸಿದ್ದಾರೆ. ಕೊನೆಗೆ ಆಕೆ ತನ್ನ ಗೆಳೆಯನ ಮನೆಯಲ್ಲಿ ಪತ್ತೆಯಾಗಿದ್ದಳು.