ಪುತ್ತೂರು : ನಾಪತ್ತೆಯಾಗಿದ್ದ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಶವ ಪತ್ತೆ ಪತ್ತೆಯಾಗಿದೆ.
ಬದ್ರುದ್ದೀನ್ ಡಿಕೆ(27) ಮೃತ ಯುವಕ. ಕಳೆದ ಮೂರು ದಿನಗಳಿಂದ ಸೇಡಿಯಾಪಿನ ರಸ್ತೆ ಬದಿಯಲ್ಲಿದ್ದ ದ್ವಿಚಕ್ರ ವಾಹನ ಇತ್ತು. ಇಂದು ಹನುಮಾಜೆ ಗುಡ್ಡದ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕಳೆದ ಎಂಟು ವರ್ಷಗಳಿಂದ ಚಿಕನ್ ಸೆಂಟರ್ ನಲ್ಲಿ ಯುವಕ ಕೆಲಸ ಮಾಡಿಕೊಂಡಿದ್ದನು.
ನ.29ರಂದು ಎಂದಿನಂತೆ ಚಿಕನ್ ಸೆಂಟರ್ ಗೆ ಬದ್ರುದ್ದೀನ್ ಬಂದಿದ್ದನು. ಬಳಿಕ ಮಾಲಕರಿಗೆ ತಿಳಿಸಿ ಬದ್ರುದ್ದೀನ್ ಹೊರ ಹೋಗಿದ್ದರು.ಆದರೆ ಮನೆಗೂ ತೆರಳದೆ, ಕೆಲಸಕ್ಕೂ ಬಾರದೆ ಬದ್ರುದ್ದೀನ್ ಕಾಣೆಯಾಗಿದ್ದನು. ಇದಾದ ಮೂರು ದಿನಗಳ ಬಳಿಕ ಹನುಮಾಜೆ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದೆ.
ಆತ್ಮಹತ್ಯೆಯ ಹಿಂದಿನ ಉದ್ದೇಶ ಇನ್ನೂ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ನಗರ ಠಾಣಾ ಸಬ್ ಇನ್ಸ್‍ಪೆಕ್ಟರ್ ಆಂಜನೇಯ ರೆಡ್ಡಿ ಭೇಟಿ ನೀಡಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

