ಮಂಗಳೂರು: ಮುಸ್ಲಿಂ ಯುವಕರ ಗುಂಪಿನ ಮಧ್ಯೆ ರಣಭೀಕರ ತಲ್ವಾರು ಕಾಳಗ ನಡೆದಿದ್ದು, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಯುವಕರ ಮೇಲೆ ರೌಡಿಶೀಟರ್ ಗಳಿಂದ ಯದ್ವಾತದ್ವಾ ತಲ್ವಾರ್ ದಾಳಿ ಮಾಡಿದ್ದು, ನಡುಬೀದಿಯಲ್ಲಿ ಯುವಕರ ಅಟ್ಟಾಡಿಸಿ ತಲ್ವಾರಿನಲ್ಲಿ ರೌಡಿ ಗ್ಯಾಂಗ್ ಕೊಚ್ಚಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ನಡೆದಿದೆ.

ತಲ್ವಾರ್ ದಾಳಿಯಲ್ಲಿ ಇಬ್ಬರು ಯುವಕರ ಸ್ಥಿತಿ ಗಂಭೀರವಾಗಿದ್ದು, ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ಮಾರಕ ದಾಳಿ ನಡೆದಿದೆ. ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಆರೋಪಿಗಳು.

ತಸ್ಲೀಮ್ ಹಾಗೂ ಸ್ನೇಹಿತರು ಮಾತನಾಡುತ್ತಿದ್ದ ವೇಳೆ ತಸ್ಲೀಮ್ ಗೆ ಕರೆಯೊಂದು ಬಂದಿತ್ತು. ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದನು. ಈ ವೇಳೆ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ ದಾಳಿ ನಡೆದಿದೆ.
ಆರೋಪಿ ಮನ್ಸೂರ್ ಹಾಗೂ ಇತರರಿಂದ ತಲವಾರಿನಿಂದ ತಸ್ಲೀಮ್ ಮೇಲೆ ದಾಳಿ ಮಾಡಿದೆ. ಬಲಗಾಲು, ಬಲಗೈಗೆ ಕಡಿದು ಮಹಮ್ಮದ್ ಶಾಕೀರ್ ಗೂ ಅದೇ ರೀತಿ ತಲವಾರಿನಿಂದ ತಂಡ ಕಡಿದಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಳೇ ದ್ವೇಷದಿಂದ ಕರೆಸಿ ತಲವಾರಿನಿಂದ ದಾಳಿ ಶಂಕೆ ವ್ಯಕ್ತವಾಗಿದೆ. ತಲವಾರು ಹಿಡಿದು ನಡುರಾತ್ರಿ ರೌಡಿ ತಂಡಗಳ ಅಟ್ಟಹಾಸ ನಡೆಸಿದೆ.

