ತಿ.ನರಸೀಪುರ: ಮದುವೆ ಆಗುವುದಾಗಿ ನಂಬಿಸಿ ವಿವಾಹಿತ ಮಹಿಳೆಗೆ ಯುವಕನೊಬ್ಬ ವಂಚಿಸಿರುವ ಪ್ರಕರಣ ಮೈಸೂರಿನ ತಿ. ನರಸೀಪುರದಲ್ಲಿ ಬೆಳಕಿಗೆ ಬಂದಿದೆ.10 ತಿಂಗಳಿಂದ ಲಿವಿಂಗ್ ಟುಗೆದರ್ ನಲ್ಲಿದ್ದ ಯುವಕ ಎಸ್ಕೇಪ್ ಆಗಿದ್ದಾನೆ.

ದಾವಣಗೆರೆ ಸಮೀಪ ಅರಸಾಪುರದ ಯುವಕ ಪರಶುರಾಮ್ ಮಹಿಳೆಗೆ ವಂಚಿಸಿರುವಾತ. ಕೋಲಾರದಲ್ಲಿ ಉದ್ಯೋಗ ಮಾಡುತ್ತಿದ್ದ. ಬಸ್ ನಲ್ಲಿ ಇಬ್ಬರ ಮಧ್ಯೆ ಪರಿಚಯವಾಗಿತ್ತು. ಬಳಿಕ ಲವ್ ಮಾಡುವುದಾಗಿ ಮಹಿಳೆಗೆ ನಂಬಿಕೆ ಹುಟ್ಟಿಸಿದ್ದ. ನಿನ್ನನ್ನೇ ಮದುವೆ ಆಗುವುದಾಗಿ ಪ್ರತ್ಯೇಕವಾಗಿ ಸಂಸಾರ ಮಾಡಿ ಈಗ ದಿಡೀರ್ ನಾಪತ್ತೆಯಾಗಿದ್ದಾನೆ.

ತಾಯಿಗೆ ಆರೋಗ್ಯ ಸರಿ ಇಲ್ಲವೆಂದು ಊರಿಗೆ ಹೋಗಿ ಮತ್ತೊಂದು ಯುವತಿ ಜೊತೆ ಮದುವೆಗೆ ತಯಾರಿ ನಡೆಸಿದ್ದಾನೆ. ಯುವಕನ ಮನೆಗೆ ಹೋಗಿ ವಿಚಾರ ಮಾಡಿದ್ದಕ್ಕೆ ಮಹಿಳೆ ವಿರುದ್ದವೇ ಪೊಲೀಸರಿಗೆ ದೂರು ನೀಡಿದ್ದಾರೆ. ಅನ್ಯಾಯಕ್ಕೊಳಗಾದ ಮಹಿಳೆಯ ದೂರು ಪೊಲೀಸರು ಸ್ವೀಕರಿಸರಿಸಿಲ್ಲ. ನ್ಯಾಯಕ್ಕಾಗಿ ಮಹಿಳೆ ಅಂಗಲಾಚುತ್ತಿದ್ದಾಳೆ. ಯುವಕನ ಮೋಸದಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಷ್ಟಾದರೂ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ದ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.